ಕರ್ನಾಟಕ ಭವನದ ವೆಬ್ ಸೈಟ್  ಹಾಗೂ ಕೊಠಡಿ ಕಾಯ್ದಿರಿಸುವಿಕೆ ಪೋರ್ಟಲ್ ಲೋಕಾರ್ಪಣೆ ಮಾಡಿದ ಡಾ. ಸಂದೀಪ್ ದವೆ

ನವದೆಹಲಿ, ಫೆಬ್ರವರಿ, 20,2021(www.justkannada.in): ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಕೌಟಿಲ್ಯ ಮಾರ್ಗದಲ್ಲಿನ ಕರ್ನಾಟಕ ಭವನ-1ರ ಕಾವೇರಿಯಲ್ಲಿ ಶನಿವಾರ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರೂ ಆದ ಡಾ.ಸಂದೀಪ್ ದವೆ ಅವರು ಕರ್ನಾಟಕ ಭವನದ ಜಾಲತಾಣ ಹಾಗೂ ಕೊಠಡಿ ಕಾಯ್ದಿರಿಸುವಿಕೆ ಪೋರ್ಟಲ್ ನ್ನು ಲೋಕಾರ್ಪಣೆಗೊಳಿಸಿದರು.jk

ನವದೆಹಲಿಯ ಕರ್ನಾಟಕ ಭವನವು ಅತಿಗಣ್ಯ ಅತಿಥಿಗಳು ಆಗಮಿಸುವ ರಾಜ್ಯದ ಆತಿಥ್ಯ ಸಂಸ್ಥೆಯಾಗಿದೆ. ಮತ್ತಷ್ಟು ಕ್ರಿಯಾ ಶೀಲವಾಗಿ ಕಾರ್ಯ ನಿರ್ವಹಿಸುವ ಹಿನ್ನಲೆಯಲ್ಲಿ ಈ ಜಾಲತಾಣ ಬಳಸಿಕೊಂಡು ಕಾರ್ಯನಿರ್ವಹಿಸಲು ಅನುವಾಗುವತ್ತ ಹಾಗೂ ಭವನದ ಎಲ್ಲಾ ಕಾರ್ಯಚಟುವಟಿಕೆಗಳನ್ನು ವಿದ್ಯುನ್ಮಾನೀಕರಿಸುವ ನಿಟ್ಟಿನಲ್ಲಿ ನಾವೀನ್ಯತೆಯನ್ನೊಳಗೊಂಡಿರುವ ಜಾಲತಾಣ (ವೆಬ್ ಸೈಟ್) ಹಾಗೂ ಪೋರ್ಟಲ್ ಪ್ರಾರಂಭಿಸಲಾಗಿದೆ ಎಂದು ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತ ಡಾ. ಸಂದೀಪ್ ದವೆ ಅವರು ತಿಳಿಸಿದರು.

ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿ ವಿವರಗಳು ಈ ಜಾಲತಾಣದಲ್ಲಿ ಅಳವಡಿಸಲಾಗಿದೆ. ರಾಜ್ಯದಿಂದ ದೆಹಲಿಗೆ ಆಗಮಿಸುವ ಗಣ್ಯರೂ ಸೇರಿದಂತೆ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ವಿವರ ದೊರೆಯಲಿ ಎಂಬ ಉದ್ಧೇಶದಿಂದ ಈ ಜಾಲತಾಣವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಈ ಹಿಂದೆ ಕರ್ನಾಟಕ ಭವನವು ಜಾಲತಾಣ ಹೊಂದಿತ್ತು. ಸಕಾಲಿಕವಾಗಿ ಹಾಗೂ ಸಮಗ್ರವಾಗಿ ಮಾಹಿತಿಯನ್ನೊಳಗೊಂಡ ನೂತನ ತಂತ್ರಾಂಶವನ್ನು ಅಳವಡಿಸಿಕೊಂಡು ಕರ್ನಾಟಕ ಮುನ್ಸಿಪಲ್ ಡಾಟಾ ಸೋಸೈಟಿ, ಬೆಂಗಳೂರು ಅವರು ಈ ವೆಬ್ ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದವರು ಹೇಳಿದರು. ಈ ಜಾಲತಾಣಗಳು ಸಾಕಾರಗೊಳ್ಳಲು ಕಾರಣರಾದ ಅಧಿಕಾರಿ: ಸಿಬ್ಬಂದಿಯವರನ್ನು ಈ ಸಂದರ್ಭ ಶ್ಲಾಘಿಸಿದರು.

ಹೊಸದಾಗಿ ಪ್ರಾರಂಭಗೊಂಡ www.karnatakabhavan.karnataka.gov.in ಈ ವೆಬ್ ತಾಣದಲ್ಲಿ ರಾಜ್ಯದ ರಾಯಭಾರಿ ಕಚೇರಿ ಎನಿಸಿಕೊಂಡಿರುವ ನವದೆಹಲಿಯ ಕರ್ನಾಟಕ ಭವನಕ್ಕೆ ಸಂಬಂಧಿಸಿದ ಮಾಹಿತಿ ವಿವರ, ಸರ್ಕಾರದ ಪ್ರಮುಖ ಆದೇಶಗಳು, ಸೌಲಭ್ಯಗಳು, ವಿಮಾನ ನಿಲ್ದಾಣದಿಂದ ಹಾಗೂ ರೈಲ್ವೆ ನಿಲ್ದಾಣದಿಂದ ಭವನಕ್ಕಿರುವ ದೂರ, ರಾಜ್ಯಕ್ಕೆ ಸಂಬಂಧಿಸಿದ  ಮಾಹಿತಿ ಈ ಜಾಲತಾಣವು ಒಳಗೊಂಡಿದೆ.

ಪೋರ್ಟಲ್ ಬಗ್ಗೆ,

ಕರ್ನಾಟಕ ಭವನಕ್ಕೆ ಆಗಮಿಸುವ ಅತಿಥಿಗಳ ಕೊಠಡಿ ಕಾಯ್ದಿರಿಸುವಿಕೆ, ತಂಗುವಿಕೆ ಹಾಗು ಆಗಮನ ಹಾಗೂ ನಿರ್ಗಮನದ ಕುರಿತ ಇಲ್ಲಿಯವರೆಗೆ ಮ್ಯಾನ್ಯುಯಲ್ ಆಗಿ ನಿರ್ವಹಿಸಲಾಗುತ್ತಿತ್ತು. ದೀರ್ಘವಾದ ಈ ಪ್ರಕ್ರಿಯೆಗೆ ಪರ್ಯಾಯವಾಗಿ ಸರಳೀಕರಿಸುವ ನಿಟ್ಟಿನಲ್ಲಿ ಫೋರ್ಟಲ್ ತತ್ರಾಂಶವನ್ನು ಕರ್ನಾಟಕ ಭವನ ಇಂದು ಪ್ರಾರಂಭಿಸಿದ್ದು, ಪ್ರಾಥಮಿಕ ಹಂತವಾಗಿ ಅತಿಥಿಗಳ ಕೊಠಡಿ ಕಾಯ್ದಿರಿಸುವಿಕೆ, ಆಗಮನ-ನಿರ್ಗಮನದ ಮಾಹಿತಿಯನ್ನು ಆನ್ ಲೈನ್ ಮೂಲಕವೇ ಕರ್ನಾಟಕ ಭವನದ ಹಂತದಲ್ಲಿ ನಿರ್ವಹಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಶೀಘ್ರವಾಗಿ, ಈ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಮುಕ್ತಗೊಳಿಸಲಾಗುವುದೆಂದು ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತ  ಎಚ್.ಪ್ರಸನ್ನ್  ಅವರು ಮಾಹಿತಿ ನೀಡಿದರು.

ಅತಿಥಿಗಳ ಕೊಠಡಿ ಕಾಯ್ದಿರಿಸುವಿಕೆಯ ವಿವರ ಸ್ವೀಕರಿಸಿದ ನಂತರ, ಆನ್ ಲೈನನಲ್ಲಿ ಕಾಯ್ದಿರಿಸಿ, ಸಂಬಂಧಿಸಿದವರಿಗೆ ತಿಳಿಸಲಾಗುವುದು. ಅತಿಥಿಗಳು ಭವನಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ತಂಗುವಿಕೆಯ ಮುಂತಾದ ಮಾಹಿತಿ ವಿವರಗಳು ಆನ್ ಲೈನ್ ಮೂಲಕ ಅತಿಥಿಗಳು ಪಡೆಯುವ ವ್ಯವಸ್ಥೆ ಈ ನಾವೀನ್ಯತೆಯ ತಂತ್ರಾಂಶ ಒಳಗೊಂಡಿದೆ ಎಂದವರು ಹೇಳಿದರು. ಸುಲಲಿತವಾಗಿ ಹಾಗೂ ಶೀಘ್ರವಾಗಿ ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಭವನವು ಕೊಠಡಿ ಕಾಯ್ದಿರಿಸುವಿಕೆ ಹಾಗೂ ಊಟೋಪಚಾರ, ಆಗಮನ-ನಿರ್ಗಮನಕ್ಕೆ  ಪೋರ್ಟಲ್ ಬಳಸಿಕೊಂಡು ಕಾರ್ಯನಿರ್ವಹಿಸಲಾಗುವುದೆಂದು ಎಚ್. ಪ್ರಸನ್ನ್ ಅವರು ತಿಳಿಸಿದರು.Karnataka Bhavan -web site - room reservation portal -innaugrate

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ನಿವಾಸಿ ಆಯುಕ್ತರಾದ ವಿಜಯ ರಂಜನ್ ಸಿಂಗ್, ಅಪರ ನಿವಾಸಿ ಆಯುಕ್ತರಾದ ಗುರ್ನೀತ್ ತೇಜ್  ಕರ್ನಾಟಕ ಭವನದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಭವನದ ಉಪ ಸಮನ್ವಯಾಧಿಕಾರಿ ಶ್ರೀ ರೇಣು ಕುಮಾರ  ಅವರು ಸ್ವಾಗತಿಸಿ ಕೊನೆಗೆ ವಂದಿಸಿದರು.

Key words: Karnataka Bhavan -web site – room reservation portal -innaugrate