ತಡರಾತ್ರಿಯಾದ್ರೂ ಬಾರದ ವಿಮಾನ: ಕಾದುಕುಳಿತ ಪ್ರಯಾಣಿಕರಿಂದ ಮಂಡಕಳ್ಳಿ ಏರ್ ಪೋರ್ಟ್ ಸಿಬ್ಬಂದಿ ವಿರುದ್ಧ ಆಕ್ರೋಶ.

ಮೈಸೂರು,ಮೇ,9,2022(www.justkannada.in):  ಮೈಸೂರಿನಿಂದ ಗೋವಾಗೆ ತೆರಳಬೇಕಿದ್ಧ ವಿಮಾನ ತಡರಾತ್ರಿಯಾದರೂ ಬಾರದ ಹಿನ್ನೆಲೆ ಕಾದು ಕುಳಿತಿದ್ಧ ಪ್ರಯಾಣಿಕರು ಏರ್ ಪೋರ್ಟ್ ಸಿಬ್ಬಂದಿಗಳ ವಿರುದ‍್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ ನಡೆದಿದೆ.

ಮೈಸೂರಿನ ಮಂಡಕ್ಕಳ್ಳಿ ಏರ್‌ಪೋರ್ಟ್‌ನಲ್ಲಿ ನಿನ್ನೆ ಘಟನೆ ನಡೆದಿದೆ. ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಗೋವಾಗೆ ತೆರಳಲು ಮೈಸೂರು ಏರ್ ಪೋರ್ಟ್ ಗೆ ಬಂದಿದ್ದರು.  ಆದರೆ ಮಧ್ಯಾಹ್ನ 3.25ಕ್ಕೆ ಬರಬೇಕಿದ್ದ ಏರ್‌ ಲೈನ್ಸ್ ವಿಮಾನ ರಾತ್ರಿ 11 ಗಂಟೆಯಾದರೂ ಬರಲಿಲಲ. ಈರವರೆಗೂ ವಿಮಾನ ಬರುತ್ತೆ ಬರುತ್ತೆ ಏರ್‌ಪೋರ್ಟ್ ಸಿಬ್ಬಂದಿ ಹೇಳಿದ್ದರು.

ಬಳಿಕ ಕಾದುಕುಳಿತಿದ್ದ ಪ್ರಯಾಣಿಕರಿಗೆ  ಕೊನೆ ಘಳಿಗೆಯಲ್ಲಿ ವಿಮಾನ ರದ್ದಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದು ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು  ಏರ್‌ಪೋರ್ಟ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.  ಮಧ್ಯಾಹ್ನದಿಂದ ರಾತ್ರಿವರೆಗೂ ಕಾದು ಕಾದು ಸುಸ್ತಾಗಿದ್ದ ಪ್ರಯಾಣಿಕರನ್ನ ಪೊಲೀಸರ ಮೂಲಕ ಹೊರ ಹಾಕಲು ಯತ್ನಸಿದ್ದರು ಎನ್ನಲಾಗಿದ್ದು, ಏರ್ಪೋರ್ಟ್ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಅಕ್ರೋಶ ವ್ಯಕ್ತಪಡಿಸಿದರು.

Key words: mysore- airport- Outrage – staff – passengers.