ಕರ್ನಾಟಕ ಬಂದ್: ಕೋಲಾರದಲ್ಲಿ ರಸ್ತೆ ತಡೆದು ಧರಣಿ: ಹುಬ್ಬಳ್ಳಿಯಲ್ಲಿ  ಅಂಗಡಿ ಮುಂಗಟ್ಟು ಮುಚ್ಚಿಸಿ ಪ್ರತಿಭಟನೆ…

ಹುಬ್ಬಳ್ಳಿ,ಫೆ,13,2020(www.justkannada.in): ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ  ಕಲ್ಪಿಸುವ  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ರಾಜ್ಯದ ವಿವಿಧೆಡೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಕೋಲಾರ ಮತ್ತು ಹುಬ್ಬಳ್ಳಿಯಲ್ಲೂ ಧರಣಿ ನಡೆಯುತ್ತಿದೆ.

ಹುಬ್ಬಳ್ಳಿಯ ಸಂಗೊಳ್ಳಿರಾಯಣ್ಣ ವೃತ್ತದ ಬಳಿ ಸಂಗ್ರಾಮ ಸೇನೆ ಸೇರಿದಂತೆ  ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿ ಬಂದ್  ಮಾಡುತ್ತಿದ್ದಾರೆ. ಇನ್ನೊಂದೆಡೆ ಕೋಲಾರದ ಮಾರಿಕಾಂಬ ವೃತ್ತದಲ್ಲಿ ಹೊಸೂರು-ಕೋಲಾರ- ಬೆಂಗಳೂರು ರಸ್ತೆಯನ್ನ ತಡೆದು ಕನ್ನಡಪರ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಬೆಂಗಳೂರಿನ ಆನೇಕಲ್ ಜಿಲ್ಲೆಯ ಬೊಮ್ಮಸಂದ್ರದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ರಸ್ತೆಯಲ್ಲೇ ಉಪಹಾರ ಸೇವಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿವೆ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರು ಹಾಸನ ಸೇರಿ ರಾಜ್ಯದ ವಿವಿಧೆಡೆ ಕನ್ನಡಪರ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಆಕ್ರೋಶ ಹೆಚ್ಚಾಗಿದೆ. ಇಂದಿನ ಬಂದ್ ಗೆ ಓಲಾ ಊಬರ್ ಏರ್ ಪೋರ್ಟ್ ಟ್ಯಾಕ್ಸಿ ಸಂಘಟನೆ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದು ಈ ಹಿನ್ನೆಲೆ ಓಲಾ ಊಬರ್ ವಾಹನಗಳು ಇಂದು ರಸ್ತೆಗಿಳಿದಿಲ್ಲ.  ಇನ್ನು ಕೆಎಸ್ ಆರ್ ಟಿಸಿ ಬಿಎಂಟಿಸಿ ಬಂದ್ ಗೆ ಬೆಂಬಲ ನೀಡದ ಹಿನ್ನೆಲೆ ಎಲ್ಲೆಡೆ ಸಾರಿಗೆ ಸಂಸ್ಥೆ ಬಸ್ ಗಳು ಸಂಚರಿಸುತ್ತಿವೆ.

Key words: Karnataka Banth- Kolar-Hubli-bangalore- protest