ವಾಣಿಜ್ಯ ಬಂದರು 2ನೇ ಹಂತದ ವಿಸ್ತರಣಾ ಕಾಮಗಾರಿ ತಡೆಯಲು ಮುಂದಾದ ಮೀನುಗಾರರ ಬಂಧನ: ಕಾರವಾರ ನಗರ ಬಂದ್…

ಉತ್ತರ ಕನ್ನಡ,ಜ,13,2020(www.justkannada.in): ವಾಣಿಜ್ಯ ಬಂದರು 2ನೇ ಹಂತದ ವಿಸ್ತರಣಾ ಕಾಮಗಾರಿ ತಡೆಯಲು ಮುಂದಾದ ಮೀನುಗಾರರ ಪೊಲೀಸರು ಬಂಧಿಸಿದ ಹಿನ್ನೆಲೆ ಕಾರವಾರ  ನಗರ ಬಂದ್ ಕರೆ ನೀಡಲಾಗಿದೆ.

ಮೀನುಗಾರರ ವಿರೋಧದ ನಡುವೆಯೂ ಸಾಗರಮಾಲ ಯೋಜನೆಯಡಿ ಪೊಲೀಸ್ ಬಂದೋಬಸ್ತ್ ನಲ್ಲಿ ಇಲ್ಲಿನ  ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿತ್ತು. ಇದನ್ನ ವಿರೋಧಿಸಿ ಮೀನುಕಾರರು ಕಾಮಗಾರಿಯನ್ನ ತಡೆಯಲು ಮುಂದಾಗಿದ್ದು ಈ ವೇಳೆ ಮೀನುಗಾರರನ್ನ ಪೊಲೀಸರು ಬಂಧಿಸಿದ್ದಾರೆ.

ಮೀನುಗಾರರನ್ನ ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆ ಕಾರವಾರ ನಗರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ವಿಸ್ತರಣೆ ಕಾಮಗಾರಿ ಗುತ್ತಿಗೆ ಪಡೆದಿರುವ ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್ ಲಿಮಿಟೆಡ್ ಜೆಸಿಬಿಗಳ ಮೂಲಕ ಟ್ಯಾಗೋರ್ ಕಡಲತೀರದ ಬಳಿ ಜಾಗ ಸಮತಟ್ಟು ಮಾಡಲು ಮುಂದಾಗಿತ್ತು. 500ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಬ್ಯಾರಿಕೇಡ್ ಗಳನ್ನು ಅಳವಡಿಸಿ, ಕಾಮಗಾರಿ ನಡೆಯುವ ಸ್ಥಳಕ್ಕೆ ಯಾರೂ ಬರದಂತೆ ತಡೆ ಒಡ್ಡಿದ್ದರು. ಇದೇ ಸಂದರ್ಭದಲ್ಲಿ ಕಾಮಗಾರಿ ಸ್ಥಳಕ್ಕೆ ತೆರಳಿದ ಮೀನುಗಾರರು ಪ್ರತಿಭಟನೆಗೆ ಮುಂದಾಗಿದ್ದರು. ಈ  ಹಿನ್ನೆಲೆ ಮೀನುಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದರು.

 

Key words: karavar-bandh- commercial Works -phase extension