ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕನಕಪುರದಲ್ಲಿ ಬೃಹತ್ ಪಾದಯಾತ್ರೆ: ಕಲ್ಲಡ್ಕ ಪ್ರಭಾಕರ್ ಸೇರಿ ಹಲವು ನಾಯಕರು ಭಾಗಿ..

ರಾಮನಗರ,ಜ,13,2020(www.justkannada.in):  ಕನಕಪುರದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಬಿಜೆಪಿಯಿಂದ  ಕನಕಪುರದಲ್ಲಿ ಬೃಹತ್ ಪಾದಯಾತ್ರೆ ನಡೆಯಿತು.

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ನೇತೃತ್ವದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕನಕಪುರದ ಅಯ್ಯಪ್ಪ ದೇಗುಲದಿಂದ ಹೊರಾಟ ಬೃಹತ್ ರ್ಯಾಲಿ ಚೆನ್ನಬಸಪ್ಪ ವೃತ್ತದಲ್ಲಿ ಅಂತ್ಯಗೊಂಡಿದೆ. ರ್ಯಾಲಿಯಲ್ಲಿ ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಸೇರಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಚೆನ್ನಬಸಪ್ಪ ವೃತ್ತದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ರ್ಯಾಲಿ ವೇಳೆ ಮಾತನಾಡಿದ ಸಿ.ಪಿಯೋಗೇಶ್ವರ್, ಸ್ಥಳೀಯ ಜನರಿಗೆ ಧೈರ್ಯ ತುಂಬಲು ಕನಕಪುರ ಚಲೋ ಆಯೋಜಿಸಲಾಗಿದೆ. ಮುಂದೆಯೂ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.

Key words: Huge rally-Kanakapura – protest – construction -statue of Jesus-Kalladka Prabhakar