‘ನಾನು ಮತ್ತು ಗುಂಡ’ ಸಿನಿಮಾಗೆ ಡಬ್ ಮಾಡಿದ ‘ಬೆಂಗಳೂರು ಡೇಸ್’ ಶ್ವಾನ !

ಬೆಂಗಳೂರು, ಜನವರಿ 13, 2019 (www.justkannada.in): ಶಿವರಾಜ್ ಕೆಆರ್ ಪೇಟೆ ಹಾಗೂ ಸಂಯುಕ್ತ ಹೆಗ್ಡೆ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಗುಂಡ ಮತ್ತು ಸಿಂಬಾ ಎಂಬ ಎರಡು ಶ್ವಾನಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿವೆ.

ನಾಯಿಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದೇನು ವಿಶೇಷವಲ್ಲ. ಈ ಎರಡು ಶ್ವಾನಗಳು ತಾವು ನಟಿಸಿರುವ ಪಾತ್ರಕ್ಕೆ ತಮ್ಮದೇ ಧ್ವನಿಯನ್ನು ಈ ಚಿತ್ರದಲ್ಲಿ ನೀಡಿವೆ.

ಇದೇ ಮೊದಲ ಬಾರಿಗೆ ಶ್ವಾನಗಳು ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ತಮ್ಮ ಪಾತ್ರಕ್ಕೆ ಧ್ವನಿ ನೀಡಿವೆ ಎಂದು ನಿರ್ದೇಶಕ ರಘು ಹಾಸನ್ ಹೇಳಿದ್ದಾರೆ. ಸಿಂಬಾ ಹಾಗೂ ಗುಂಡ ರಿಹಸರ್ಲ್ ಮಾಡಿ ಎರಡು ದಿನಗಳ ಕಾಲ ತಮ್ಮ ಪಾತ್ರಕ್ಕೆ ಧ್ವನಿ ನೀಡಿವೆ. ಸಿಂಬಾ ಈ ಹಿಂದೆ ಮಲಯಾಳಂ ಸಿನಿಮಾ ಬೆಂಗಳೂರು ಡೇಸ್ ನಲ್ಲಿ ಅಭಿನಯಿಸಿತ್ತು.