ಕಾಂತರಾಜ್ ವರದಿ: ಡಿಸಿಎಂ ಆಕ್ಷೇಪದ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ.

ಬೆಂಗಳೂರು,ಜನವರಿ,19,2024(www.justkannada.in): ಕಾಂತರಾಜ್ ವರದಿ ಜಾತಿ‌ ಜನಗಣತಿ ಅಲ್ಲ.  ಅದು ಶೈಕ್ಷಣಿಕ, ಆರ್ಥಿಕ ಸಾಮಾಜಿಕ‌ ವರದಿ. ವರದಿ ಲೀಕ್ ಆಗಿದೆ ಅಂದಿದ್ದು ಯಾರು? ವರದಿ ನೋಡದೆ ಮಾತನಾಡಿದರೇ ಹೇಗೆ. ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬ್ರೂ ಸಹ ವರದಿ ವಿರೋಧ ಮಾಡುತ್ತಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ದಲಿತರು 1 ಕೋಟಿ 10 ಲಕ್ಷ ಅಂತ ಹೇಳಿದ್ಯಾರು. ವರದಿ ಲೀಕ್ ಆಗಿದೆ ಅಂದಿದ್ದು ಯಾರು? 168 ಕೋಟಿ ರೂ.  ಹಣ ಖರ್ಚು ಮಾಡಿ ಮಾಡಿದ ವರದಿ ನಾನೇ ಸಚಿವನಾಗಿ ಹೇಳ್ತಿದ್ದೇನೆ ಲೀಕ್ ಆಗಿಲ್ಲ ವರದಿ ಓದಲಾಗದೆ ಸುಮ್ಮನೆ ಹೇಳಿದ್ರೆ ಹೇಗೆ..? ವರದಿ ಓದದೆ ಸುಮ್ಮನೆ ಅಷ್ಟಿದ್ದಾರೆ ಇಷ್ಟಿದ್ದಾರೆ ಅಂದ್ರೆ ಹೇಗೆ? ವರದಿ ಮೊದಲು ಸಲ್ಲಿಕೆಯಾಗಲಿ. ಆಮೇಲೆ ವರದಿ ಓದಲಿ. ಏನಿದೆ ಏನಿಲ್ಲ ಅನ್ನೋದು‌ ಗೊತ್ತಾಗುತ್ತದೆ ಮೊದಲೇ ಊಹೆ ಮಾಡಿ ಹೇಳಿದ್ರೆ ಹೇಗೆ? ಎಂದು ಪ್ರಶ್ನಿಸಿದರು.

ಒಳ ಮೀಸಲಾತಿ ಗೊಂದಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ಒಳ ಮೀಸಲಾತಿ ಬಗ್ಗೆ ಕಾರಜೋಳ ಹೇಳಿದ್ದಾರೆ. ಇಲ್ಲೇ ನಿರ್ಧಾರ ಮಾಡಬಹುದಿತ್ತು ಅಂದಿದ್ದಾರೆ. ಇವರೇ ಹಿಂದೆ ತೆಗೆದುಕೊಳ್ಳಬಹುದಿತ್ತು. ಹಿಂದೆ ಅವರೇ ವರದಿ ರಿಜೆಕ್ಟ್ ಮಾಡಿದರು. ಸದಾಶಿವ ಆಯೋಗದ ವರದಿ ರಿಜೆಕ್ಟ್ ಮಾಡಿದರು. ಆದರೂ ಬಿಜೆಪಿ ಕಣ್ಣು ಹೊರೆಸುವ ಕೆಲಸ ಮಾಡಿದೆ. ನಾವು 341ನೇ ತಿದ್ದುಪಡಿಗೆ ನಿರ್ಣಯ ಮಾಡಿದ್ದೇವೆ. ಅದನ್ನ ಕೇಂದ್ರಕ್ಕೆ ಕಳಿಸಿದ್ದೇವೆ. ಕಾರಜೋಳ ಜಗಳ ಹಚ್ಚುವ ಕೆಲಸ ಮಾಡಿದ್ದರು.ರಿಜೆಕ್ಟ್ ಮಾಡೋ ವರದಿ ತೆಗೆದುಕೊಳ್ಳೋಕೆ ಬರಲ್ಲ ಎಂದರು.

ತುಂಗಭದ್ರಾ ನೀರಿನಲ್ಲಿ ಆಂಧ್ರದ ಪಾಲಿದೆ. ರಾಜ್ಯಕ್ಕೂ ನೀರನಲ್ಲಿ ಪಾಲಿದೆ. ಮಳೆ ಇಲ್ಲದ ಕಾರಣ ನೀರು ಶೇಖರಿಸಿದ್ದೇವೆ. ನಾಲ್ಕು ಜಿಲ್ಲೆಗೆ ಕುಡಿಯುವ ನೀರು ಕೊಡಬೇಕು. ಇವತ್ತು ಕುಡಿಯುವ ನೀರು ಹಂಚಿಕೆ ಮಾಡಿದ್ದೇವೆ. ಈ ‌ಬಾರಿ ನಮಗೆ ಒಂದೇ ಬೆಳೆ ಬಂದಿದ್ದು. ಎರಡನೇ ಬೆಳೆ ನಮಗೆ ಬರಲಿಲ್ಲ. ವಿಜಯನಗರದಲ್ಲಿ ಸ್ಟಾಂಡಿಂಗ್ ಕ್ರಾಪ್ ಇದೆ. ಹಾಗಾಗಿ 5 ಟಿಎಂಸಿ ನೀರು ಕೊಟ್ಟಿದ್ದೇವೆ. ಕುಡಿಯುವ ನೀರು ಬೇಕಾದಾಗ ಡಿಸಿಗಳು ಕೊಡ್ತಾರೆ. ಫೆಬ್ರವರಿಯಲ್ಲಿ  ಎರಡು ಬಾರಿ ನೀರು ಡ್ರಾ ಮಾಡ್ತೇವೆ. ಮಾರ್ಚ್ ವರೆಗೆ ನೀರು ಸ್ಟಾಕ್ ಮಾಡಿದ್ದೇವೆ. ಜೂನ್ ಜುಲೈವರೆಗೆ ನಾವು ನೀರು ರಕ್ಷಿಸಬೇಕಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ. ಕುಡಿಯುವ ನೀರಿಗೆ ಮಾತ್ರ ರಕ್ಷಿಸಲಾಗಿದೆ. ಸ್ಟಾಂಡಿಂಗ್ ಕ್ರಾಪ್ ಗೆ ಮಾತ್ರ ನೀರು ಬಿಡ್ತೇವೆ. ಹೂಳು ಎತ್ತುವುದು ಕಷ್ಟ. ಸಮನಾಂತರ ಡ್ಯಾಂ ನಿರ್ಮಿಸಬೇಕು. ಆಂಧ್ರ, ತೆಲಂಗಾಣ ಇದಕ್ಕೆ ಒಪ್ಪಿಗೆ ಕೊಡಬೇಕು. ಮೂರು ರಾಜ್ಯದ ಸಿಎಂ ಚರ್ಚೆ ಮಾಡಬೇಕು. ಮೂರು ರಾಜ್ಯದ ನೀರಾವರಿ ಸಚಿವರು ಚರ್ಚಿಸಬೇಕು. ನಂತರ ನಿರ್ಧಾರ ತೆಗೆದುಕೊಳ್ಳಬಹುದು. ಹೂಳು ಎತ್ತೋಕೆ ಸಾಧ್ಯವೇ ಇಲ್ಲ ಎಂದು ಟೆಕ್ನಿಕಲ್ ಕಮಿಟಿಯವರು ಸ್ಪಷ್ಟಪಡಿಸಿದ್ದಾರೆ. ಹೂಳು ತೆಗೆಯಲು 35 ಸಾವಿರ ಎಕರೆ ಭೂಮಿ ಬೇಕು. ಅದಕ್ಕೆ ಬದಲು ಒಂದು ಡ್ಯಾಂ ನಿರ್ಮಿಸಬಹುದು ಎಂದು ಶಿವರಾಜ್ ತಂಗಡಗಿ ತಿಳಿಸಿದರು.

Key words: Kantaraj Report- Minister -Shivraj Tangadagi -clarified