Monday, September 28, 2026

BDA Apartments

ಬೆಂಗಳೂರಿನಂತೆ ನ.1 ರಿಂದ ಮೈಸೂರಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಆಗ್ರಹಿ...
Home Front Page ಬೆಂಗಳೂರಿನಂತೆ ನ.1 ರಿಂದ ಮೈಸೂರಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಬೆಂಗಳೂರಿನಂತೆ ನ.1 ರಿಂದ ಮೈಸೂರಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು, ಅ.31, 2019 : (www.justkannada.in news ) ನಗರದ ಎಲ್ಲಾ ಅಂಗಡಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ನಗರಪಾಲಿಕೆ ಎದುರು ಕರ್ನಾಟಕ ಸೇನಾಪಡೆಯಿಂದ ಪ್ರತಿಭಟನೆ.ಕನ್ನಡ ನಾಮ ಫಲಕ ಅಳವಡಿಕೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ, ಈ ಸಂಬಂಧ ಪಾಲಿಕೆ ಆಯುಕ್ತರು ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಲಾಯಿತು.

ಶೇ.೬೦ ಭಾಗ ಕನ್ನಡ ನಾಮಫಲಕ ಹಾಕುವಂತೆ ಸುತ್ತೋಲೆ ಹೊರಡಿಸಬೇಕು. ಬೆಂಗಳೂರಿನಲ್ಲಿ ನವೆಂಬರ್.೧ ರಿಂದ ಕನ್ನಡ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾಗಾಗಿ ಮೈಸೂರಿನಲ್ಲೂ ಅದೇ ಮಾದರಿಯಲ್ಲಿ ಆದೇಶ ಹೊರಡಿಸಬೇಕು. ಕನ್ನಡ ನಾಮಫಲಕ ಹಾಕದ ಸಂಸ್ಥಗಳ ಪರವಾನಗಿ ರದ್ದುಮಾಡಬೇಕು. ಪ್ರತಿಭಟನಕಾರರ ಒತ್ತಾಯ.

 

key words : kannada-name.plate-mysore-protest-corporation