Monday, September 21, 2026

BDA Apartments

Home Cinema ಡಬಲ್ ಮೀನಿಂಗ್’ನಿಂದಲೇ ಸೀರಿಯಸ್ ಸಂದೇಶ ಹೇಳ್ತಿದೆ ‘ಪೆಟ್ರೋಮ್ಯಾಕ್ಸ್’: ಗಮನ ಸೆಳೆದ ಟ್ರೇಲರ್

ಡಬಲ್ ಮೀನಿಂಗ್’ನಿಂದಲೇ ಸೀರಿಯಸ್ ಸಂದೇಶ ಹೇಳ್ತಿದೆ ‘ಪೆಟ್ರೋಮ್ಯಾಕ್ಸ್’: ಗಮನ ಸೆಳೆದ ಟ್ರೇಲರ್

ಬೆಂಗಳೂರು, ಜುಲೈ 08, 2022 (www.justkannada.in):  ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ನಟನೆಯ ‘ಪೆಟ್ರೋಮ್ಯಾಕ್ಸ್​’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ಡಬಲ್​ ಮೀನಿಂಗ್ ಡೈಲಾಗ್​ನಿಂದಲೇ ಈ ಟ್ರೇಲರ್ ಆರಂಭವಾಗುತ್ತಿದ್ದು, ಇದರ ಜತೆ ಸಮಾಜಕ್ಕೆ ಸಂದೇಶವೊಂದನ್ನು ಸಾರುತ್ತಿದೆ.

‘ನೀರ್‌ ದೋಸೆ’ ಚಿತ್ರದ ನಿರ್ದೇಶಕ ವಿಜಯ್‌ ಪ್ರಸಾದ್‌ ‘ಪೆಟ್ರೋಮ್ಯಾಕ್ಸ್‌’ನಲ್ಲಿ ಡಬಲ್ ಮೀನಿಂಗ್ ನಲ್ಲೇ ಸೀರಿಯಸ್ ಸಂದೇಶವೊಂದನ್ನು ನೀಡುವ ಸೂಚನೆ ಟ್ರೇಲರ್ ನಲ್ಲಿದೆ.

ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೆಚ್ಚಿನ ಜನರಿಗೆ ಇಷ್ಟವಾಗಿದೆ. ಮಾಮೂಲಿಯಾಗಿ ನನ್ನ ಚೇಷ್ಟೆ ಡೈಲಾಗ್‌ಗಳಿಂದ ಕೆಲವರಿಗೆ ಇರಿಸುಮುರುಸು ಆಗಿದೆ. ಅದು ಸಹಜ. ಅದನ್ನು ಹೊರತುಪಡಿಸಿ ತುಂಬಾ ಜನ ಇಷ್ಟಪಟ್ಟಿದ್ದಾರೆ ಎಂದು ವಿಜಯ್‌ ಪ್ರಸಾದ್‌ ಹೇಳಿಕೊಂಡಿದ್ದಾರೆ.

ನಾವು ನಿರ್ಮಾಪಕರನ್ನೂ ಉಳಿಸಿಕೊಳ್ಳಬೇಕು, ಸಿನಿಮಾನೂ ಗೆಲ್ಲಬೇಕು, ಗಂಭೀರ ವಿಷಯವನ್ನೂ ಹೇಳಬೇಕು. ಈ ಎಲ್ಲಾ ದೃಷ್ಟಿಯಿಂದ ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ ನೀರ್ ದೋಸೆ ಡೈರೆಕ್ಟರ್.