Saturday, September 12, 2026

BDA Apartments

ಐ ಲವ್ ಯು ಸಿಂಬಲ್ ಮಾಡಿ ಸೆಲ್ಫೆ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ ! BDA JK_Adv BDA Adv
Home Cinema ಐ ಲವ್ ಯು ಸಿಂಬಲ್ ಮಾಡಿ ಸೆಲ್ಫೆ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ !

ಐ ಲವ್ ಯು ಸಿಂಬಲ್ ಮಾಡಿ ಸೆಲ್ಫೆ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ !

ಬೆಂಗಳೂರು, ಜೂನ್ 01, 2019 (www.justkannada.in): ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ “ಐ ಲವ್ ಯೂ” ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ “ಐ ಲವ್ ಯೂ” ಚಿತ್ರತಂಡ ಅಭಿಮಾನಿಗಳಿಗಾಗಿ ಸ್ಪರ್ಧೆ ಏರ್ಪಡಿಸಿದೆ.

ನಿಮ್ಮ ಕೈಯಲ್ಲಿ ಐಲವ್ ಯು ಸಿಂಬಲ್ ಮಾಡಿ ಚಿತ್ರತಂಡಕ್ಕೆ ಸೆಲ್ಫಿ ಕಳಿಸಬೇಕು. ಅತ್ಯುತ್ತಮ ಸೆಲ್ಫಿಗೆ ಚಿತ್ರತಂಡದಿಂದ ಬಹುಮಾನವನ್ನೂ ನೀಡಲಾಗುತ್ತದಂತೆ.

ಸಿನಿಮಾ ಟ್ರೈಲರ್ ನಲ್ಲಿ ಉಪ್ಪಿ ಹಾಗೂ ರಚಿತಾ ರಾಮ್ ಸಂಭಾಷಣೆ ಬೊಂಬಾಟ್ ಆಗಿ ಮೂಡಿ ಬಂದಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹುಟ್ಟುಹಾಕಿದೆ.