Sunday, September 20, 2026

BDA Apartments

ಸ್ಪರ್ಧಿಗಳಿಗೆ ಶಾಕ್ ನೀಡಿದ ‘ಬಿಗ್ ಬಾಸ್’ BDA JK_Adv BDA Adv
Home Cinema ಸ್ಪರ್ಧಿಗಳಿಗೆ ಶಾಕ್ ನೀಡಿದ ‘ಬಿಗ್ ಬಾಸ್’

ಸ್ಪರ್ಧಿಗಳಿಗೆ ಶಾಕ್ ನೀಡಿದ ‘ಬಿಗ್ ಬಾಸ್’

ಬೆಂಗಳೂರು, ನವೆಂಬರ್ 12, 2019 (www.justkannada.in): ಕನ್ನಡ ಬಿಗ್ ಬಾಸ್ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ.

ಇದೀಗ ಮನೆ ಬದಲಿಸುವ ಮೂಲಕ ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ಬಿಗ್ ಶಾಕ್ ನೀಡಿದ್ದಾರೆ. ಎರಡು ನಿಮಿಷದೊಳಗೆ ಬಟ್ಟೆ, ಆಹಾರ ಸೇರಿ ಅಗತ್ಯ ವಸ್ತುಗಳ ಸಮೇತ ಮನೆ ಖಾಲಿ ಮಾಡುವಂತೆ ದಿಢೀರ್ ಸೂಚನೆ ನೀಡಿದ್ದರಿಂದ ಆತಂಕದಲ್ಲಿಯೇ ಸದಸ್ಯರು ಮನೆ ಖಾಲಿ ಮಾಡಿದ್ದಾರೆ.

ಐಷಾರಾಮಿ ಮನೆ ಬದಲಿಗೆ ಸಾಮಾನ್ಯ ಮನೆಯಲ್ಲಿ ಸ್ಪರ್ಧಿಗಳು ಕಾಲ ಕಳೆಯಬೇಕಿದೆ. ಇನ್ನು ಈ ವಾರ ಕ್ಯಾಪ್ಟನ್ ಇರುವುದಿಲ್ಲ.
ಕ್ಯಾಪ್ಟನ್ ಆಯ್ಕೆ ರೇಸ್ ನಲ್ಲಿದ್ದ ವಾಸುಕಿ, ದೀಪಿಕಾ ಮತ್ತು ಭೂಮಿ ಅವರಿಗೆ ಚಟುವಟಿಕೆ ನೀಡಲಾಗಿದ್ದು, ಗೆದ್ದವರಿಗೆ ನಾಮಿನೇಷನ್ ನಿಂದ ಹೊರಗುಳಿಯುವ ಅವಕಾಶವಿದೆ.