Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಗ್ರಂಥಾಲಯ ಸ್ಥಾಪನೆಗೆ ಸ್ಥಳೀಯರಿಂದ ಮನವಿ: ಇಂದಿರಾ ಕ್ಯಾಂಟಿನ್ ನಲ್ಲಿ ಅನ್ನ ಸಾಂಬರ್ ರುಚಿ ಸವಿದ ಇಬ್ಬರು...

ಗ್ರಂಥಾಲಯ ಸ್ಥಾಪನೆಗೆ ಸ್ಥಳೀಯರಿಂದ ಮನವಿ: ಇಂದಿರಾ ಕ್ಯಾಂಟಿನ್ ನಲ್ಲಿ ಅನ್ನ ಸಾಂಬರ್ ರುಚಿ ಸವಿದ ಇಬ್ಬರು ಸಚಿವರು…

ಕಲ್ಬುರ್ಗಿ,ಜು,2,2019(www.justkannada.in):  ಕಲಬುರಗಿ ನಗರದ ಸ್ವಸ್ತಿಕ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ನಗರಾಭಿವೃದ್ಧಿ ಸಚಿವ  ಯು.ಟಿ.ಖಾದರ್ ಅವರು ಭೇಟಿ ನೀಡಿದರು.

ಭೇಟಿ ವೇಳೆ ಸಚಿವದ್ವಯರನ್ನ ಭೇಟಿಯಾದ ಸ್ಥಳೀಯರು ಉದ್ಯಾನವನದಲ್ಲಿ ಗ್ರಂಥಾಲಯ ಸ್ಥಾಪಿಸಿ ಓದುಗರಿಗೆ ಅನುಕೂಲ ಮಾಡಕೊಡಬೇಕೆಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವದ್ವಯರು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ, ಜಯದೇವ ಆಸ್ಪತ್ರೆಯ ಹತ್ತಿರ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟಿನ್ ಗೆ ಸಚಿವರಿಬ್ಬರು ಭೇಟಿ ನೀಡಿದರು. ಇದೇ ವೇಳೆ ಅಲ್ಲಿನ ಅಡುಗೆಯವರು ತಯಾರಿಸಿದ್ದ ಅನ್ನ ಹಾಗೂ ಸಾಂಬಾರ್ ರುಚಿ ಸವಿದರು. ಸಾಂಬಾರ್ ರುಚಿ ನೋಡಿದ ಸಚಿವರು ಸಾಂಬಾರ್ ಚೆನ್ನಾಗಿದೆ ಇದೇ ರುಚಿ ಮುಂದುವರೆಸಿ ಹಾಗೂ ಸ್ವಚ್ಛತೆಗೆ ಆದ್ಯತೆ ಕೊಡಿ ಎಂದು ಸಲಹೆ ನೀಡಿದರು.

Key words: kalburgi-ministers-ut kadhar-priyank kharge – tasted -riceSambar – Indira Canteen.