Saturday, August 15, 2026

BDA Apartments

Home Front Page ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ದಂಪತಿ

ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ದಂಪತಿ

ಹೊಸೂರು:ಜುಲೈ-2:(www.justkannada.in) ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಟೆಕ್ಕಿ ದಂಪತಿ ತಮ್ಮ ಮಗುವಿನೊಂದಿಗೆ ದರ್ಗಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸೂರಿನಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡಿನ ನಾಗರಕೊಯಿಲ್​ನ ಕಣ್ಣನ್ (31), ಪತ್ನಿ ಕಲ್ಪನಾ (27) ಮೃತರು. ಪತಿ-ಪತ್ನಿ ಶವ ಸಿಕ್ಕಿದ್ದು, ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಕೆರೆ ಬಳಿ ಕಣ್ಣನ್ ಬೈಕ್ ಪತ್ತೆ ಆಗಿದ್ದು, ಅದರ ಬಳಿ ಮಗುವಿನ ಚಪ್ಪಲಿ ಸಿಕ್ಕಿದೆ. ದಂಪತಿ ಬೆಂಗಳೂರಿನಿಂದ ಬಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಣ್ಣನ್ ಅವರನ್ನು ಕಂಪನಿ ಇತ್ತೀಚೆಗೆ ಕೇರಳಕ್ಕೆ ವರ್ಗಾವಣೆ ಮಾಡಿತ್ತು. ಆದರೆ, ಅಲ್ಲಿಗೆ ತೆರಳಲು ಹಿಂದೇಟು ಹಾಕಿದ್ದರು ಎನ್ನಲಾಗಿದ್ದು, ಕಂಪನಿ ಇವರ ಬೇಡಿಕೆಗೆ ಸ್ಪಂದಿಸಿರಲಿಲ್ಲ. ಇದರಿಂದಲೇ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದುರ್ಗಾ ಕೆರೆಯಲ್ಲಿ ಭಾರೀ ಪ್ರಮಾಣದಲ್ಲಿ ಜೊಂಡು ಹುಲ್ಲುಗಳು ಬೆಳೆದಿರುವುದರಿಂದ ಮಗುವಿನ ಶವ ಪತ್ತೆಗೆ ತೊಡಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ದಂಪತಿ

Bangalore,Tekki family,Commits suicide,Darga lake