Friday, October 2, 2026

BDA Apartments

Mysore dasara BDA JK_Adv BDA Adv
Home Front Page ಜಿ.ಎಸ್ ಬಸವರಾಜು ಒಬ್ಬ ಬಫೂನ್: ಕಾಮನ್ ಸೆನ್ಸ್ ಇಲ್ಲದ ವ್ಯಕ್ತಿ- ಏಕವಚನದಲ್ಲೇ ಸಚಿವ ಎಸ್ ಆರ್ ...

ಜಿ.ಎಸ್ ಬಸವರಾಜು ಒಬ್ಬ ಬಫೂನ್: ಕಾಮನ್ ಸೆನ್ಸ್ ಇಲ್ಲದ ವ್ಯಕ್ತಿ- ಏಕವಚನದಲ್ಲೇ ಸಚಿವ ಎಸ್ ಆರ್  ಶ್ರೀನಿವಾಸ್  ವಾಗ್ದಾಳಿ…

ತುಮಕೂರು,ಜು,2,2019(www.justkannada.in):  ಗಂಗೆ ಶಾಪದಿಂದ  ಹೆಚ್.ಡಿ ದೇವೇಗೌಡರು ಸೋತಿದ್ದಾರೆ ಎಂದು ಹೇಳಿಕೆ ನೀಡಿದ್ದ ತುಮಕೂರು ಬಿಜೆಪಿ ಸಂಸದ ಜಿ.ಎಸ್ ಬಸವರಾಜು ವಿರುದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಆರ ಶ್ರೀನಿವಾಸ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಜಿ.ಎಸ್ ಬಸವರಾಜು ಒಬ್ಬ ಬಫೂನ್. ಅವನು ಕಾಮನ್ ಸೆನ್ಸ್ ಇಲ್ಲದ ಮನುಷ್ಯ . ಮೋದಿ ಹವಾ ಹೇಮಾವತಿ ನೀರು ವಿಚಾರವಿಟ್ಟುಕೊಂಡು ಗೆದ್ದಿದ್ದಾರೆ ಎಂದು ಸಚಿವ ಎಸ್,ಆರ್ ಶ್ರೀನಿವಾಸ್ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡಿದ ಸಚಿವ ಎಸ್.ಆರ್ ಶ್ರೀನಿವಾಸ್, ಜಿಎಸ್ ಬಸವರಾಜು ಜನರನ್ನ ಮೂರ್ಖರನ್ನಾಗಿ ಮಾಡಿ ಗೆದ್ದಿದ್ದಾರೆ. ಅವರಿಗೆ ಗ್ರಾ. ಪಂ ಸದಸ್ಯನಾಗಿ ಗೆಲ್ಲುವ ಅರ್ಹತೆ ಇಲ್ಲ. ಅವನು ಏನು ಕೆಲಸ ಮಾಡಲ್ಲ. ಅವನು ಏನಾದ್ರೂ ಕೆಲಸ ಮಾಡಿದರೇ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.

key words: GS Basavaraju –buffoon-  Minister S R Srinivas -tumakur