Thursday, September 10, 2026

BDA Apartments

Home Front Page ಕಬಿನಿ‌ ಜಲಾಶಯಕ್ಕೆ ಒಳಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಕಬಿನಿ‌ ಜಲಾಶಯಕ್ಕೆ ಒಳಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಮೈಸೂರು,ಮೇ,31,2025 (www.justkannada.in): ರಾಜ್ಯದಲ್ಲಿ ಪೂರ್ವಮುಂಗಾರು ಚುರುಕಾಗಿದ್ದು ರಾಜ್ಯದ್ಯಂತ ನಿರಂತರ ಮಳೆಯಾಗುತ್ತಿದೆ.  ಭಾರಿ ಮಳೆಯಿಂದ ಕೇರಳದ ವೈನಾಡಿನಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಸೂಕ್ತ ಸ್ಥಳಕ್ಕೆ ತೆರಳುವಂತೆ ನದಿ ಪಾತ್ರದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ  ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ‌ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ಜಲಾಶಯಕ್ಕೆ 18,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾಯಶದಿಂದ ನದಿಗೆ 9000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.vtu

ಮತ್ತಷ್ಟು ಒಳಹರಿವು ಬರುವ ಸಾಧ್ಯತೆ ಹಿನ್ನೆಲೆ 9000‌ ಕ್ಯೂಸೆಕ್ ನೀರನ್ನ ನದಿಗೆ ಬಿಡುಗಡೆ ಮಾಡಲಾಗಿದ್ದು, ನೀರು ನದಿ ಮೂಲಕ ನೇರವಾಗಿ ತಮಿಳುನಾಡು ಸೇರಲಿದೆ. ಜಲಾಶಯ ಒಟ್ಟು 2284 ಅಡಿಗಳ ಎತ್ತರವಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 2280.50 ಅಡಿಯಾಗಿದೆ. ರಾಜ್ಯದಲ್ಲಿಯೇ ಮೊದಲು ಭರ್ತಿ‌ ಆಗಿರುವ ಏಕೈಕ ಜಲಾಶಯ ಇದಾಗಿದ್ದು, ವರ್ಷದಲ್ಲಿ ಎರಡು ಬಾರಿ ಭರ್ತಿಯಾಗಲಿದೆ.

Key words: Increased, inflow, Kabini reservoir,  Warning, people