ತೆವಲಿಗೋಸ್ಕರ ಮಾತನಾಡಬಾರದು : ಮೊದಲು ನಿಮ್ಮ ಆತ್ಮಸಾಕ್ಷಿ ಮುಟ್ಟಿ ನೋಡಿಕೊಳ್ಳಿ- ಸಿಎಂ ಇಬ್ರಾಹಿಂ ವಿರುದ್ದ ಜೆಡಿಎಸ್ ಶಾಸಕ ವಾಗ್ದಾಳಿ.

ಕೋಲಾರ, ಅಕ್ಟೋಬರ್, 17,2023(www.justkannada.in):  ಬಿಜೆಪಿ ಜೊತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಒರಿಜಿನಲ್ ಜೆಡಿಎಸ್ ನಮ್ಮದೇ ಎಂದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರುದ್ಧ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

ತೆವಲಿಗೋಸ್ಕರ ಮಾತನಾಡಬಾರದು. ಹೆಚ್.ಡಿ ಕುಮಾರಸ್ವಾಮಿ‌ ಅವರನ್ನು ‌ಪಕ್ಷದಿಂದ‌ ಉಚ್ಚಾಟನೆ ಮಾಡುವುದಾಗಿ ಹೇಳುವ ಇಬ್ರಾಹಿಂ, ಮೊದಲು ಅವರ ಆತ್ಮಸಾಕ್ಷ್ಮಿಯನ್ನು ಮುಟ್ಟಿ ನೋಡಿಕೊಳ್ಳಲಿ ಎಂದು ಸಮೃದ್ಧಿ ಮಂಜುನಾಥ್ ತಿರುಗೇಟು ನೀಡಿದ್ದಾರೆ.

ಜೆಡಿಎಸ್ ನಲ್ಲಿ 19 ಶಾಸಕರು ಗೆದ್ದರೂ ನೋವಿನಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಇಬ್ರಾಹಿಂ ಅವರ ತೇವಲುಗಳಿಗೆ‌ ಚಿಂತನಾ ಮಂಥನ ಕಾರ್ಯಕ್ರಮ‌ ಹಮ್ಮಿಕೊಳ್ಳುವುದು ಸೂಕ್ತವಲ್ಲ. ಇಬ್ರಾಹಿಂ ಅವರ ಗಮನಕ್ಕೆ ಬಾರೆದೆ ಪಕ್ಷದಲ್ಲಿ‌ ಏನು ನಡೆದಿಲ್ಲ. ಮತ್ತೊಂದು ದಿನ ನಾನು ಬಾಯಿ ಬಿಚ್ಚಬೇಕಾಗುತ್ತೆ. ಹೈಕಮಾಂಡ್ ನನಗೆ ಬಾಯಿ ಬಿಚ್ಚಲು ಅನುಮತಿ ನೀಡಿಲ್ಲ ಎಂದರು.

ಅವರ ತೇವಲುಗೋಸ್ಕರ ಮಾತಬಾಡಬಾರದು. ಶಾಸಕರ‌ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನಿಖಿಲ್ ಕುಮಾರಸ್ವಾಮಿ‌ ಸೋತ ಕಾರಣ ನೈತಿಕ ಹೊಣೆ ಹೊತ್ತು ಯುವ ಘಟಕಕ್ಕೆ ರಾಜಿನಾಮೇ ಕೊಟ್ಟರು. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದು‌ ಯಾರು?  ಎಂದು ಪ್ರಶ್ನಿಸಿದರು.

Key words: JDS- MLA –Samruddi Manjunath-against- CM Ibrahim.