ಸಂಗಾತಿ ಆಯ್ಕೆ ಬದುಕಿನ ಹಕ್ಕು: ಸಲಿಂಗ ವಿವಾಹ ಮಾನ್ಯತೆ ವಿಚಾರವಾಗಿ ಸರ್ಕಾರ ಸಮಿತಿ ರಚಿಸಲಿ- ಸುಪ್ರೀಂಕೋರ್ಟ್.

ನವದೆಹಲಿ,ಅಕ್ಟೋಬರ್,17,2023(www.justkannada.in): ಸಂಗಾತಿ ಆಯ್ಕೆ ಬದುಕಿನ ಹಕ್ಕಾಗಿದೆ.  ಸಲಿಂಗ ವಿವಾಹ ಮಾನ್ಯತೆ ವಿಚಾರವಾಗಿ ಸರ್ಕಾರ ಸಮಿತಿ ರಚಿಸಲಿ ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ  ಸಂವಿಧಾನ ಪೀಠ, ನಾವು ಕಾನೂನು ರೂಪಿಸಲು ಆಗಲ್ಲ. ಮಧ್ಯಪ್ರವೇಶಿಸಬಹುದು. ನಾವು ಕಾನೂನಿನ ಕುರಿತು ವ್ಯಾಖ್ಯಾನ ನೀಡಬಹುದು. ಈ ವಿಚಾರದಲ್ಲಿ ವಿಶೇಷ ಮದುವೆಕಾಯ್ದೆ ಪ್ರಮುಖ ಪಾತ್ರ ವಹಿಸಲಿದೆ. ಸಲಿಂಗ ಮದುವೆ ಮಾನ್ಯತೆ ಬಗ್ಗೆ ಸಂಸತ್ ನಿರ್ಣಯ ಕೈಗೊಳ್ಳಬಹುದು. ಸಲಿಂಗ ವಿವಾಹ ಮಾನ್ಯತೆ ವಿಚಾರವಾಗಿ ಸರ್ಕಾರ ಸಮಿತಿ ರಚಿಸಲಿ ಎಂದು ತಿಳಿಸಿದೆ.

ಪ್ರೀತಿ ಪ್ರೇಮ ಎಂಬುದು ಮನುಷ್ಯನ ಮೂಲಭೂತ ಹಕ್ಕು. ಸಂಗಾತಿ ಆಯ್ಕೆ ಬದುಕಿನ ಹಕ್ಕು. ತನ್ನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ನಾಗರೀಕರ ಹಕ್ಕುಗಳನ್ನ ರಕ್ಷಣೆ ಮಾಡಬೇಕು  ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Key words: Right – choose- life partner- Govt – form -committee – marriage -Supreme Court