ಕಾಂಗ್ರೆಸ್‌ ಕಲೆಕ್ಷನ್‌ ಜೋರು: ಕನ್ನಡಿಗರ ಹಣ ಪಂಚರಾಜ್ಯಗಳ ಪಾಲು- ರಾಜ್ಯ ಬಿಜೆಪಿ ಟೀಕೆ.

ಬೆಂಗಳೂರು,ಅಕ್ಟೋಬರ್,17,2023(www.justkannada.in):  ಐಟಿ ದಾಳಿ  ವೇಳೆ ಗುತ್ತಿಗೆದಾರನ ಮನೆಯಲ್ಲಿ 40 ಕೋಟಿ ಹಣ ಸಿಕ್ಕ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಲೇ ಇದ್ದು ಟ್ವೀಟ್ ಸಮರ ಮುಂದುವರೆದಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಟೀಕಾಪ್ರಹಾರ ನಡೆಸಿದ್ದವು. ಇದೀಗ ಮತ್ತೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಹರಹಾಯ್ದಿದೆ. ಕಾಂಗ್ರೆಸ್‌ ಬಂದಿದೆ-ಕಲೆಕ್ಷನ್‌ ಜೋರಾಗಿದೆ. ರಾಜ್ಯವನ್ನು ದೋಚುವ ಸ್ಪರ್ಧೆ ತೀವ್ರವಾಗಿದೆ!! ಕನ್ನಡಿಗರ ಹಣ ಪಂಚ ರಾಜ್ಯಗಳ ಪಾಲಾಗುತ್ತಿದೆ. ಕನ್ನಡಿಗರ ಬದುಕು ಪಂಚರ್‌ ಆಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

Key words: Congress-collection -money – five states-BJP-tweet