ವಿಧಾನಸಭೆ ಚುನಾವಣೆಗೆ 100 ಅಭ್ಯರ್ಥಿಗಳ ಪಟ್ಟಿ ಸಿದ್ಧ:ಬಿಡುಗಡೆಗೆ ನಮ್ಮ ಪಕ್ಷದ ಜ್ಯೋತಿಷಿಗಳಿಂದ ತಕರಾರು- ಮಾಜಿ ಸಿಎಂ ಹೆಚ್.ಡಿಕೆ ಹೇಳಿಕೆ.

0
2

ಮೈಸೂರು,ನವೆಂಬರ್,18,2022(www.justkannada.in): ಮುಂದಿನ ವಿಧಾನಸಭೆ ಚುನಾವಣೆ ಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾದರೇ ಇತ್ತ ಶಾಸಕ ಹೆಚ್.ಡಿ ರೇವಣ್ಣ ತಕರಾರು ತೆಗಿದಿದ್ದಾರಂತೆ.

ಹೌದು ಇಂದು ಪ್ರಸಕ್ತವಾದ ಸಮಯವಲ್ಲ ಎಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ  ಹೆಚ್.ಡಿ ರೇವಣ್ಣ ತಕರಾರು ತೆಗೆದಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಚುನಾವಣೆಗೆ ಕಣಕ್ಕಿಳಿಯುವ 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ.  ಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಇಂದು ಸಮಯ ಪ್ರಸಕ್ತವಾಗಿಲ್ಲ ಎಂದು ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ತಕರಾರು ತೆಗೆದಿದ್ದಾರೆ  ತಕರಾರು ಬಂದ ಹಿನ್ನೆಲೆ ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿಯೂ ಆಗಿರುವ ಪಕ್ಷದ ವರಿಷ್ಠ ಎಚ್‌.ಡಿ‌ ದೇವೇಗೌಡ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗುತ್ತದೆ  ಎಂದು ತಿಳಿಸಿದರು.

JDS-list -100 candidates – ready- former CM -HDK’s -statement.

ರೇವಣ್ಣ ಅವರು ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೂ ದೇವಾಲಯ, ಜ್ಯೋತಿಷ್ಯ ಶಾಸ್ತ್ರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಾಮಾನ್ಯ ಜನಿರಿಗೂ ತಿಳಿದಿರುವ ವಿಚಾರವಾಗಿದೆ.

Key words: JDS-list -100 candidates – ready- former CM -HDK’s -statement.

ENGLISH SUMMARY..

List of 100 candidates for the forthcoming assembly elections ready: Former CM HDK
Mysuru, November 18, 2022 (www.justkannada.in): Former Chief Minister and JDS leader H.D. Kumaraswamy today informed that the list of candidates who will contest from the JDS in the assembly elections is ready. However, his sibling MLA H.D. Revanna has opposed it.
“H.D. Revanna has opposed H.D. Kumaraswamy’s decision to release the list of candidates, stating that it is not the right time. “We will release the candidates list in the coming days, at the right time,” as informed by the latter.

JDS-list -100 candidates – ready- former CM -HDK’s -statement.

Speaking in Mysuru today H.D. Kumaraswamy informed that the list of 100 candidates from JDS is ready. However he also said that his party’s ‘astrologer’ (H.D. Revanna) has opposed releasing the list stating that it is not the right time. “As a result of this we will release the list in the coming days at the right time. The list will be released at the party office in Bengaluru, in the presence of the party supremo and former Prime Minister H.D. Devegowda,” he said.
Keywords: Former CM H.D. Kumaraswamy/ H.D. Revanna/ list of candidates/ JDS