ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ:  ಸೋಲಿನ ಭಯದಿಂದ ಆರೋಪ- ಮಾಜಿ ಸಿಎಂ ಬಿಎಸ್ ವೈ ಕಿಡಿ.

ಶಿವಮೊಗ್ಗ,ನವೆಂಬರ್,18,2022(www.justkannada.in): ರಾಜ್ಯ ಸರ್ಕಾರದ ವಿರುದ್ದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಮಾಡಿದ್ಧ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಬಿಎಸ್ ವೈ, ಮತದರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಈ ಕುರಿತು ತನಿಖೆ ನಡೆಸಿಲು ಸಿದ್ದಎಂದು ಸಿಎಂ ಹೇಳಿದ್ದಾರೆ. ಕಾಂಗ್ರೆಸ್ ನವರು ಅಕ್ರಮದ ಬಗ್ಗೆ ದಾಖಲೆ ಇದ್ದರೇ ಕೊಡಲಿ ತನಿಖೆ ಮಾಡಿಸುತ್ತೇವೆ. ಸೋಲಿನ ಭಯದಿಂದ  ಕಾಂಗ್ರೆಸ್  ಆರೋಪ ಮಾಡುತ್ತಿದ್ದಾರೆ ಎಂದು ಬಿಎಸ್ ವೈ ವಾಗ್ದಾಳಿ ನಡೆಸಿದರು.prime-minister-narendra-modi-cm-bs-yeddyurappa-praised-central-government

Key words: revision – voter list- illegal-Former CM -BS Yeddyurappa