ಮುಂದಿನ ಚುನಾವಣೆಯಲ್ಲಿ ಸಿದ್ಧರಾಮಯ್ಯ, ಡಿಕೆಶಿ ಸ್ಪರ್ಧಿಸದಿದ್ದರೇ ಸೂಕ್ತ- ಮಾಜಿ ಸಚಿವ ಸಂತೋಷ್ ಲಾಡ್.

ಹುಬ್ಬಳ್ಳಿ,ನವೆಂಬರ್,18,2022(www.justkannada.in): ಮುಂದಿನ ಚುನಾವಣೆಯಲ್ಲಿ ಸಿದ್ಧರಾಮಯ್ಯ, ಡಿಕೆಶಿ ಸ್ಪರ್ಧಿಸದಿದ್ದರೇ ಸೂಕ್ತ. ಇಬ್ಬರು ನಾಯಕರು ರಾಜ್ಯ ಸುತ್ತಿ ಕಾಂಗ್ರೆಸ್ ಪಕ್ಷವನ್ನ ಬಲಪಡಿಸಲಿ ಎಂದು  ಮಾಜಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಸಂತೋಷ್ ಲಾಡ್,  ಸಿದ್ಧರಾಮಯ್ಯ 1 ಕ್ಷೇತ್ರಕ್ಕೆ  ಸೀಮಿತವಾಗುವುದು ಬೇಡ. ಡಿಕೆ ಶಿವಕುಮಾರ್ ಸಹ ಚುನಾವಣೆಯಲ್ಲಿ  ಸ್ಪರ್ಧಿಸುವುದು ಬೇಡ. ರಾಜ್ಯ ಸುತ್ತಿ ಪಜಕ್ಷ ಬಲಪಡಿಸಲಿ.

ಎಲ್ಲಾ ಕ್ಷೇತ್ರಗಳಲ್ಲಿ ಸಿದ್ಧರಾಮಯ್ಯ ಸಂಚಾರ ಮಾಡಲಿ. ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಲಿ ಎಂಬುದು ನನ್ನ ಅಭಿಪ್ರಾಯ. ಚುನಾವಣೆಯಲ್ಲಿ ಸ್ಪರ್ಧಿಸದೇ ಅಧಿಕಾರ ನಡೆಸಬಹುದು ಎಂದು ಸಂತೋಷ್ ಲಾಡ್ ತಿಳಿಸಿದರು.

Key words: better -Siddaramaiah – DK Shivakumar-contest – election – Santosh Lad