Tuesday, September 29, 2026

BDA Apartments

ಜೆಡಿಎಸ್ ಒಂದು ನಾಟಕ ಕಂಪನಿ: ಹೆಚ್ ಡಿಕೆ ಡೈಲಾಗ್ ಗೆ ಹೆದರಲ್ಲ- ಕುರುಬೂರು ಶಾಂತ...
Home Front Page ಜೆಡಿಎಸ್ ಒಂದು ನಾಟಕ ಕಂಪನಿ: ಹೆಚ್ ಡಿಕೆ ಡೈಲಾಗ್ ಗೆ ಹೆದರಲ್ಲ- ಕುರುಬೂರು ಶಾಂತಕುಮಾರ್..

ಜೆಡಿಎಸ್ ಒಂದು ನಾಟಕ ಕಂಪನಿ: ಹೆಚ್ ಡಿಕೆ ಡೈಲಾಗ್ ಗೆ ಹೆದರಲ್ಲ- ಕುರುಬೂರು ಶಾಂತಕುಮಾರ್..

ಬೆಂಗಳೂರು,ಡಿಸೆಂಬರ್,10,2020(www.justkannada.in):   ಭೂ ಸುಧಾರಣಾ ಕಾಯ್ದೆಗೆ ಬೆಂಬಲ ನೀಡಿದ ಹಿನ್ನೆಲೆ ಜೆಡಿಎಸ್ ವಿರುದ್ಧ ರೈತ ಮುಖಂಡ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.logo-justkannada-mysore

ಜೆಡಿಎಸ್ ಒಂದು ನಾಟಕ ಕಂಪನಿ ಹೆಚ್.ಡಿ ಕುಮಾರಸ್ವಾಮಿ  ಆ ನಾಟಕ ಕಂಪನಿಯ ಮುಖ್ಯಸ್ಥ. ಕುಮಾರಸ್ವಾಮಿ ರಾತ್ರಿ ಬಣ್ಣ ಹಚ್ಚಿದಾಗ  ಒಂದು ರೀತಿ ಮಾತನಾಡುತ್ತಾರೆ. ಬೆಳಿಗ್ಗೆ ಬಣ್ಣ ಹಚ್ಚಿದಾಗ ಒಂದು ರೀತಿ ಮಾತನಾಡುತ್ತಾರೆ ಎಂದು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ.jds-drama-company-farmer-leader-kuruburu-shanthakumar

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕುರುಬೂರು ಶಾಂತಕುಮಾರ್, ಹೆಚ್.ಡಿ ಕುಮಾರಸ್ವಾಮಿ ಅವರ ಡೈಲಾಗ್ ಗಳಿಗೆ ಹೆದರುವುದಿಲ್ಲ.  ಕುಮಾರಸ್ವಾಮಿ ಅವರು ರೈತರ ಬಗ್ಗೆ ಹಗುರವಾಗಿ ಮಾತನಾಡಬಾರದು. ಮುಂದೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಇದು ಹೆಚ್.ಡಿಕೆ ಅವರಿಗೆ ಎಚ್ಚರಿಕೆಯ ಘಂಟೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

Key words: JDS – drama- company-farmer leader- Kuruburu Shanthakumar.