ಗ್ರಾಪಂ ಚುನಾವಣೆ ಸದಸ್ಯ ಸ್ಥಾನ ಹರಾಜು : 44 ಜನರ ವಿರುದ್ಧ FIR…!

ಮಂಡ್ಯ,ಡಿಸೆಂಬರ್,10,2020(www.justkannada.in) : ಗ್ರಾಪಂ ಸದಸ್ಯ ಸ್ಥಾನಗಳಿಗೆ ಹರಾಜು ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಿಂಡಿಗನವಿಲೆ ಠಾಣೆಯಲ್ಲಿ 44 ಜನರ ವಿರುದ್ಧ FIR ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

logo-justkannada-mysoreಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ 3 ಸದಸ್ಯ ಸ್ಥಾನಗಳಿಗೆ ಹರಾಜು ಪ್ರಕ್ರಿಯೆ ನಡೆಸಿದ್ದರು. ಸದ್ಯ ಈಗ ಜನರ ವಿರುದ್ಧ FIR  ದಾಖಲಾಗಿದೆ.

ಗ್ರಾಮದ ಅಭಿವೃದ್ದಿ, ದೇಗುಲ ನಿರ್ಮಾಣ ಹೆಸರಿನಲ್ಲಿ ಗ್ರಾಮಸ್ಥರು ಸಂತೆಯಲ್ಲಿ ಮೇಕೆ ಹರಾಜಿನ ರೀತಿಯಲ್ಲಿ ಗ್ರಾಪಂ ಸದಸ್ಯ ಸ್ಥಾನಗಲಿಗೆ ಹರಾಜು ಕೂಗಿದ್ದರು.

ಬಿಂಡಿಗನವಿಲೆ ಠಾಣೆಯಲ್ಲಿ ಒಟ್ಟು 44 ಜನರ ವಿರುದ್ಧ ಎಫ್ ಐ ಆರ್

3 ಸ್ಥಾನಗಳಿಗೆ ಒಟ್ಟು 17.40 ಲಕ್ಷ ರೂ.ಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿ ಪೊಲೀಸರಿಗೆ ಅಧಿಕಾರಿಗಳು ದೂರು ನೀಡಿದ್ದರು. ದೂರು ಆಧರಿಸಿ ಬಿಂಡಿಗನವಿಲೆ ಠಾಣೆಯಲ್ಲಿ ಒಟ್ಟು 44 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

Grapham,election,member,position,Auction,FIR,against,44 people

key words : Grapham-election-member-position-Auction-
FIR-against-44 people