ಎರಡು ವರ್ಷಗಳ ಬಳಿಕ ದರ್ಶನ್ ಸಿನಿಮಾಗೆ ಹಾಡು ಬರೆದ ಕಾಯ್ಕಿಣಿ

ಬೆಂಗಳೂರು, ನವೆಂಬರ್ 23, 2019 (www.justkannada.in): ಕಳೆದ ಎರಡು ವರ್ಷಗಳ ಬಳಿಕ ದರ್ಶನ್ ಸಿನಿಮಾಗೆ ಜಯಂತ್ ಕಾಯ್ಕಿಣಿ ಹಾಡು ಬರೆದಿದ್ದಾರೆ.

ಈ ಹಿಂದೆ ‘ತಾರಕ್’ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ಈ ಸಿನಿಮಾದ ಎರಡು ಹಾಡುಗಳನ್ನು ಜಯಂತ್ ಕಾಯ್ಕಿಣಿ ಬರೆದಿದ್ದರು.

ಇದೀಗ ‘ಒಡೆಯ’ ಸಿನಿಮಾ ಒಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ‘ಕಾಣೆಯಾಗಿರುವ ನಾನು..’ ಹಾಡು ಜಯಂತ್ ಕಾಯ್ಕಿಣಿ ನೀಡಿದ್ದಾರೆ.

ಈ ಹಾಡು ನವೆಂಬರ್ 25ಕ್ಕೆ ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಲಿದೆ. ಸೋನು ನಿಗಮ್ ಹಾಗೂ ಅನುರಾಧ ಭಟ್ ಹಾಡಿಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ‘ಒಡೆಯ’ ಸಿನಿಮಾದ ಸಂಗೀತ ನಿರ್ದೇಶಕ.