ಒಳ್ಳೇ ಕಥೆ ತನ್ನಿ ಒಟ್ಟಿಗೆ ಸಿನಿಮಾ ಮಾಡ್ತೇವೆ ಎಂದ ಶಿವಣ್ಣ-ದರ್ಶನ್

ಬೆಂಗಳೂರು, ನವೆಂಬರ್ 23, 2019 (www.justkannada.in): ಡಾ.ರಾಜ್ ಕುಮಾರ್ ಮೊಮ್ಮಗ ಧ್ರುವನ್ ನಾಯಕರಾಗಿ ನಟಿಸಲಿರುವ ಹೊಸ ಸಿನಿಮಾ ಮುಹೂರ್ತ ಕಾರ್ಯಕ್ರಮ ನಿನ್ನೆ ನಗರದಲ್ಲಿ ನೆರವೇರಿದೆ.

ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಜತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿ ಶಿವಣ್ಣ ಕ್ಲಾಪ್ ಮಾಡಿದರೆ ದರ್ಶನ್ ಕ್ಯಾಮರಾ ಆನ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಮಾಧ್ಯಮದವರೂ ಮುಂದೊಂದು ದಿನ ನಿಮ್ಮನ್ನು ಒಂದೇ ಸಿನಿಮಾದಲ್ಲಿ ನೋಡಬಹುದೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಇಬ್ಬರೂ ಒಳ್ಳೆ ಕಥೆ ಬಂದರೆ ಗ್ಯಾರಂಟಿ ಮಾಡುತ್ತೇವೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ.