ರಣಜಿ ಪಂದ್ಯಗಳಿಗೆ ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಆತಿಥ್ಯ

ಮೈಸೂರು, ನವೆಂಬರ್ 23, 2019 (www.justkannada.in): ಹುಬ್ಬಳ್ಳಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಈ ಸಾಲಿನ ಕೆಲ ರಣಜಿ ಪಂದ್ಯಗಳು ನಡೆಯಲಿವೆ.

ಹೌದು. ಈ ಮೂರು ನಗರದ ಕ್ರಿಕೆಟ್‌ಪ್ರೇಮಿಗಳಿಗೆ ಈ ಬಾರಿಯ ರಣಜಿ ಋತುವಿನ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಲಿದೆ.

ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ನಾಲ್ಕು ಪಂದ್ಯಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆತಿಥ್ಯ ವಹಿಸಲಿದೆ.

ಡಿಸೆಂಬರ್ 17ರಿಂದ20ರವರೆಗೆ ಹುಬ್ಬಳ್ಳಿಯಲ್ಲಿ ಉತ್ತರಪ್ರದೇಶ ವಿರುದ್ಧ; 25 ರಿಂದ 28ರಂದು ಮೈಸೂರಿನಲ್ಲಿ ಹಿಮಾಚಲ ಪ್ರದೇಶ ಮತ್ತು ಫೆಬ್ರುವರಿ 4 ರಿಂದ 7ರವರೆಗೆ ಮಧ್ಯಪ್ರದೇಶದ ವಿರುದ್ಧ ಶಿವಮೊಗ್ಗದಲ್ಲಿ ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರುವರಿ 12ರಿಂದ 15ರವರೆಗೆ ನಡೆಯುವ ಪಂದ್ಯದಲ್ಲಿ ಕರ್ನಾಟಕವು ಬರೋಡಾ ಎದುರು ಆಡಲಿದೆ.