Wednesday, September 16, 2026

BDA Apartments

ಜುಲೈ 18ರಂದು ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ… BDA JK_Adv BDA Adv
Home Front Page ಜುಲೈ 18ರಂದು ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ….

ಜುಲೈ 18ರಂದು ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ….

ಮೈಸೂರು,ಜೂ, 28,2019(www.justkannada.in): ಮೈಸೂರು ರಾಜ್ಯವನ್ನು ಆಳಿದ ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ ಮೈಸೂರು ಅರಮನೆಯಲ್ಲಿ ಜುಲೈ 18 ರಂದು  ನಡೆಯಲಿದೆ.

ಈ ಬಗ್ಗೆ ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾಹಿತಿ ನೀಡಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್,  ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ  ಮೈಸೂರು ಅರಮನೆಯಲ್ಲಿ ಜುಲೈ 18 ರಂದು  ನಡೆಯಲಿದೆ.  ಜುಲೈ 20 ರಂದು ಬೆಂಗಳೂರು ಅರಮನೆಯಲ್ಲಿ ಇದೇ ಜನ್ಮ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಸೇರಿದಂತೆ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ದೆಹಲಿ, ಮುಂಬಯಿ ಸೇರಿದಂತೆ ಹಲವು ರಾಜ್ಯದ ರಾಜವಂಶಸ್ಥರು‌ ಪಾಲ್ಗೋಳ್ಳುವ ನಿರೀಕ್ಷೆ ಇದೆ ಎಂದರು.

ಸಮಾರಂಭದಲ್ಲಿ ಒಡೆಯರ್ ಬಗ್ಗೆ ಹಲವು ಚರ್ಚಾ ಗೋಷ್ಠಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ವರ್ಷ ಪೂರ್ತಿ ಮೂರು ತಿಂಗಳಿಗೆ ಒಮ್ಮೆ ಒಂದೊಂದು ಅರ್ಥ ಪೂರ್ಣ ಕಾರ್ಯಕ್ರಮ ನಡೆಸಲಾಗುವುದು ಎಂದು ಪ್ರಮೋದ ದೇವಿ ಒಡೆಯರ್ ಹೇಳಿದರು.

Key words: Jaya Chamarajendra Wodeyar- Birth -Centenary -Celebration – July 18 – Pramoda Devi Wodeyar