ಜಕ್ಕೂರು ವೈಮಾನಿಕ ತರಬೇತಿ ಶಾಲೆ ಮತ್ತು ಏರೋಡ್ರಮ್ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ – ಸಚಿವ ಡಾ. ನಾರಾಯಣಗೌಡ…

ಬೆಂಗಳೂರು ಏ. 15,2021(www.justkannada.in):  ಸಾಕಷ್ಟು ಸ್ಥಳಾವಕಾಶ, ಮೂಲ ಸೌಕರ್ಯ ಇದ್ದರೂ ಅಭಿವೃದ್ಧಿ ಕಾಣದ ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ ವೈಮಾನಿಕ ತರಬೇತಿ ಶಾಲೆ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದ್ದು,  ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು. by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ವಿಕಾಸ ಸೌಧದಲ್ಲಿ ಇಂದು ಜಕ್ಕೂರು ವೈಮಾನಿಕ ತರಬೇತಿ ಶಾಲೆ ಅಭಿವೃದ್ಧಿ ವಿಚಾರವಾಗಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸ್ಯಾಂಖಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ರಾಜ್ಯದ ನೂರಾರು ವಿದ್ಯಾರ್ಥಿಗಳಿಗೆ ವೈಮಾನಿಕ ತರಬೇತಿಗೆ ಅವಕಾಶವಾಗಬೇಕಿದ್ದ ಶಾಲೆ ಇಂದು ಡೋಲಾಯಮಾನ ಸ್ಥಿತಿಯಲ್ಲಿದೆ. ಹೀಗಾಗಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಯಿತು. ವೈಮಾನಿಕ ತರಬೇತಿ ಹಾಗೂ ಏರೋಡ್ರಮ್ ಅಭಿವೃದ್ಧಿಯಲ್ಲಿ  ಅನುಭವ ಹೊಂದಿರುವ ಸ್ಕೈಬರ್ಡ್ ಹಾಗೂ ವಿಂಗ್ಸ್ ಕಂಪೆನಿಗಳು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದು, ವಾರದೊಳಗೆ ಸಂಪೂರ್ಣ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ಸಚಿವ ನಾರಾಯಣಗೌಡ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾತ್ಯಕ್ಷಿಕೆ ನೀಡಿದ ಕಂಪೆನಿಗಳು ಪ್ರತಿ ವರ್ಷ ಕನಿಷ್ಟ 100 ವಿದ್ಯಾರ್ಥಿಗಳಿಗೆ ವೈಮಾನಿಕ ತರಬೇತಿ ನೀಡುವುದಾಗಿ ತಿಳಿಸಿವೆ. ಅಲ್ಲದೆ ಮೈಮಾನಿಕ ತರಬೇತಿ ಶಾಲೆ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಸೇರಿದಂತೆ ಇನ್ನಿತರ ಕ್ರೀಡಾ ಚಟುವಟಿಕೆಗಳನ್ನೂ ನಡೆಸಲು ಉದ್ದೇಶಿಸಲಾಗಿದೆ. ಕಾರ್ಯಯೋಜನೆಯ ಮಾಹಿತಿ ಪಡೆದು, ಸಚಿವ ಸಂಪುಟದ ಮುಂದೆ ಕೂಡಲೆ ಅನುಮೋದನೆಗೆ ಮಂಡಿಸುವಂತೆ ಸಚಿವ ನಾರಾಯಣಗೌಡ ಸೂಚಿಸಿದರು.

ಇದರಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಗಳು ವೈಮಾನಿಕ ತರಬೇತಿ ಪಡೆಯಲು ಅವಕಾಶವಾಗಲಿದೆ. ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಆದಾಯ ಬರಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಲಿದೆ. 18 ತಿಂಗಳು ತರಬೇತಿ ಪಡೆದು ಲಕ್ಷಾಂತರ ರೂ. ಸಂಬಳ ಪಡೆಯುವ ಅವಕಾಶ ರಾಜ್ಯದ ಯುವಜನತೆಗೆ ಸಿಗಲಿದೆ. ಆದ್ದರಿಂದ ಶೀಘ್ರದಲ್ಲೇ ವೈಮಾನಿಕ ತರಬೇತಿ ಶಾಲೆಗೆ ಹೈಟೆಕ್ ಟಚ್ ನೀಡಿ, ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ದರ ಪರಿಷ್ಕರಣೆಗೆ ನಿರ್ಧಾರ: ಅಧಿಕಾರಿಗಳ ಕಾರ್ಯವೈಖರಿಗೆ ಸಚಿವರು ಗರಂ

ಈ ಸಂದರ್ಭದಲ್ಲಿ ಜಕ್ಕೂರಿನಲ್ಲಿರುವ ಏರೋ ಡ್ರಮ್ ವಿಚಾರದಲ್ಲಿ ಅಧಿಕಾರಿಗಳ ನಡೆಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ಕಂಪೆನಿಗಳಿಗೆ ಹೆಲಿಕಾಪ್ಟರ್ ಪಾರ್ಕಿಂಗ್‍ಗೆ ಹಾಗೂ ಲ್ಯಾಂಡಿಂಗ್‍ ಗೆ ಸ್ಥಳ ನೀಡಲಾಗಿದ್ದು, ಲ್ಯಾಂಡಿಂಗ್ ಚಾರ್ಜ್ 1 ಕೋಟಿ ರೂ. ಗಿಂತಲು ಹೆಚ್ಚು ಬಾಕಿ ಹಣ ಬರಬೇಕಿದೆ. ವಸೂಲಿಗೆ ಸೂಚಿಸಿ ತಿಂಗಳಾದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಕಿಡಿಕಾರಿದರು. ಅಲ್ಲದೆ ಹೆಚ್‍ಎಎಲ್‍ಗೆ ಹೋಲಿಸಿದಲ್ಲಿ ಬಾಡಿಗೆ ಹಾಗೂ ಲ್ಯಾಂಡಿಂಗ್ ಚಾರ್ಜ್ ತೀರಾ ಕಡಿಮೆ ಇದೆ. ಕೂಡಲೆ ಬಾಡಿಗೆ ದರ ಪರಿಷ್ಕರಣೆ ಮಾಡಿ, ಹೆಚ್‍ಎಎಲ್ ರೀತಿಯಲ್ಲೇ ಬಾಡಿಗೆ ನಿಗದಿಪಡಿಸಬೇಕು ಎಂದು ಸಚಿವ ನಾರಾಯಣಗೌಡ ಸೂಚಿಸಿದರು. ತಿಂಗಳ ಬಾಡಿಗೆ 50 ಸಾವಿರ ಹಾಗೂ ಪ್ರತಿ ಲ್ಯಾಂಡಿಂಗ್ ಚಾರ್ಜ್ 25 ಸಾವಿರ ನಿಗದಿಪಡಿಸಬೇಕು. ಪ್ರಸ್ತುತ ಜಕ್ಕೂರ್ ಏರೋಡ್ರಮ್‍ನಲ್ಲಿ ಪ್ರತಿ ಲ್ಯಾಂಡಿಂಗ್‍ ಗೆ ದೊಡ್ಡ ಏರ್‍ಕ್ರಾಫ್ಟ್ ಗೆ 500 ರೂ. ಚಿಕ್ಕ ಏರ್‍ ಕ್ರಾಫ್ಟ್‍ಗೆ 200 ರೂ. ಮಾತ್ರ ಇದೆ. ಅಲ್ಲದೆ ತಿಂಗಳ ಬಾಡಿಗೆ ಕೂಡ ಕೇವಲ 10 ಸಾವಿರ ರೂ. ಮಾತ್ರ. ಇಷ್ಟೊಂದು ಕಡಿಮೆ ಬಾಡಿಗೆ ಸರಿಯಲ್ಲ. ತಕ್ಷಣ ದರ ಪರಿಷ್ಕರಣೆ ಹಾಗೂ ಬಾಕಿ ವಸೂಲಿ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.

ಶೇ. 98 ರಷ್ಟು ಸಾಧನೆ- ಸಚಿವರ ಶ್ಲಾಘನೆ

ಇದೇ ಮೊದಲ ಬಾರಿಗೆ ಇಲಾಖೆಗೆ ಒದಗಿಸಿದ ಅನುದಾನಲ್ಲಿ ಶೇ. 98 ರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು. ಆದಾಗ್ಯೂ ಕೆಲವು ಜಿಲ್ಲೆಗಳಲ್ಲಿ 100 ರಷ್ಟು ಪ್ರಗತಿ ಸಾಧಿಸದೆ ಇರುವುದಕ್ಕೆ ಸಚಿವರು ಗರಂ ಆದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸದೆ ಇರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

1 ಕೋಟಿ 20 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ಆಗಲಿದ್ದು, ಈಗಾಗಲೆ 30 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೂ ಕೆಲಸ ಪ್ರಾರಂಭವಾಗಿಲ್ಲ. ಬೆಳಗಾವಿ ಸವದತ್ತಿಯಲ್ಲಿ ತಾಲೂಕು ಕ್ರೀಡಾಂಗಣದ ಕಾಮಗಾರಿಗೆ 1 ಕೋಟಿ ರೂ.ಗಳಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೆಲಸ ಇನ್ನೂ ಆರಂಭಿಸಿಲ್ಲ. ಕುಂದಾಪುರ ತಾಲೂಕು ಕ್ರೀಡಾಂಗಣದ ರೂಫಿಂಗ್ ಅಳವಡಿಕೆಗೆ 60 ಲಕ್ಷ ರೂ. ಮಂಜೂರಾಗಿದ್ದು 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೆಲಸ ನಿಧಾನಗತಿಯಲ್ಲಿದೆ. ಕಾರ್ಕಳದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ 50 ಲಕ್ಷ ರೂ. ಮಂಜೂರಾಗಿದ್ದು 25 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಕೆಲಸ ನಿಧಾನ ಗತಿಯಲ್ಲಿದೆ. ಮೈಸೂರಿನ ಹುಣಸೂರಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ 2 ಕೋಟಿ ರೂ. ಮಂಜೂರು ಮಾಡಲಾಗಿದೆ. 1 ಕೋಟಿ 30 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕ್ರೀಡಾಂಗಣದ ಮೇಲ್ಛಾವಣಿಗೆ ಟೆನ್ಸೈಲ್ ರೂಫಿಂಗ್ ಅಳವಡಿಕೆಗೆ 93 ಲಕ್ಷ ರೂ. ಮಂಜೂರು ಮಾಡಲಾಗಿದ್ದು, 30 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 3 ಕೋಟಿ 25 ಲಕ್ಷ ರೂ. ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಮಾತ್ರ ಮುಗಿದಿದೆ. ಉಳಿದ ಜಿಲ್ಲೆಗಳಲ್ಲಿ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣದ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ.jakkur-aviation-training-school-aerodrome-developed-ppp-model-minister-narayana-gowda

ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ರವೀಂದ್ರ, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Key words: jakkur- Aviation -Training School –Aerodrome- developed – PPP model-Minister -Narayana Gowda.