ಪಂಚಮಸಾಲಿಗೆ ನಾಳೆ 2ಎ ಮೀಸಲಾತಿ ಪ್ರಕಟ ಆಗುತ್ತೆ, ಯಾವುದೇ ಸಂಶಯವಿಲ್ಲ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಬೆಳಗಾವಿ,ಡಿಸೆಂಬರ್,21,2022(www.justkannada.in): ನಾಲ್ಕೈದು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು ಆ ಮುಂಚೆಯೇ ಪಂಚಮಸಾಲಿ ಸಮುದಾಯಕ್ಕೆ 2ಎ  ಮೀಸಲಾತಿ ಪಡೆಯಬೇಕೆಂಬ ಹಠದಿಂದ ಪಟ್ಟು ಹಿಡಿದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದು  ಸಮುದಾಯದ ಜನರು ಬೆಂಬಲ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾಳೇ 2ಎ ಮೀಸಲಾತಿ ಪ್ರಕಟ ಆಗುತ್ತೆ ಯಾವುದೇ ಸಂಶಯವಿಲ್ಲ. ಈಗಲೂ ಸರ್ಕಾರದ ಮೇಲೆ ವಿಶ್ವಾಸವಿದೆ ಎಂದರು.

ನಾನು ಕೇಂದ್ರ ಸಚಿವನಾಗಲು ಬಿಎಸ್ ಯಡಿಯೂರಪ್ಪ ಪಾತ್ರ ಏನು ಇಲ್ಲ. ನಾನು ಮಂತ್ರಿಯಾದ ಬಳಿಕ ಬಿಎಸ್ ವೈಗೆ ಪುನರ್ಜನ್ಮ ಸಿಕ್ಕಿದೆ ಎಂದು ಯತ್ನಾಳ್ ಹೇಳಿದರು.

Key words: Panchmasali -2A reservation- e announced –tomorrow- no doubt-MLA- Basana Gowda Patil Yatnal.