Saturday, August 8, 2026

BDA Apartments

Home Front Page ಜಗದೀಶ್ ಶೆಟ್ಟರ್ ಅವರೇ ಇನ್ನೂ ಕಾಲ ಮಿಂಚಿಲ್ಲ: ಇನ್ನೊಮ್ಮೆ ಯೋಚಿಸಿ, ಮರಳಿ ಪಕ್ಷಕ್ಕೆ ಬನ್ನಿ- ಕೆ.ಎಸ್...

ಜಗದೀಶ್ ಶೆಟ್ಟರ್ ಅವರೇ ಇನ್ನೂ ಕಾಲ ಮಿಂಚಿಲ್ಲ: ಇನ್ನೊಮ್ಮೆ ಯೋಚಿಸಿ, ಮರಳಿ ಪಕ್ಷಕ್ಕೆ ಬನ್ನಿ- ಕೆ.ಎಸ್ ಈಶ್ವರಪ್ಪ ಮನವಿ.

ಶಿವಮೊಗ್ಗ,ಏಪ್ರಿಲ್,17,2023(www.justkannada.in):  ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮರಳಿ ಬಿಜೆಪಿಗೆ ಬರುವಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.

ಜಗದೀಶ್ ಶೆಟ್ಟರ್ ಅವರೇ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೀರಿ. ಕಾಲ ಇನ್ನೂ ಮಿಂಚಿಲ್ಲ. ಇನ್ನೊಮ್ಮೆ ಯೋಚಿಸಿ. ಮರಳಿ ಪಕ್ಷಕ್ಕೆ ಬನ್ನಿ ಎಂದು ಕೆ.ಎಸ್.ಈಶ್ವರಪ್ಪ ಜಗದೀಶ್ ಶೆಟ್ಟರಿಗೆ ಬಹಿರಂಗ ಪತ್ರದ ಮೂಲಕ ಮನವಿ  ಮಾಡಿದರು.


ಇಂದು ಪತ್ರಿಕಾ ಗೋಷ್ಠಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಬರೆದ ಬಹಿರಂಗ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರೇ ಪಕ್ಷ ನಿಮಗೆ ಎಲ್ಲವನ್ನೂ ನೀಡಿದೆ. 6 ಬಾರಿ ಶಾಸಕರಾಗಿದ್ದೀರಿ. ರಾಜ್ಯಾಧ್ಯಕ್ಷರಾಗಿದ್ದೀರಿ. ಪಕ್ಷ ನಿಮಗೆ ಮುಖ್ಯಮಂತ್ರಿ ಪಟ್ಟವನ್ನೂ ನೀಡಿದೆ. ಕೇವಲ ಒಂದು ಟಿಕೆಟ್‍ ಗಾಗಿ ತಲತಲಾಂತರದಿಂದ ಬಂದ ಬಿಜೆಪಿಯ ಸಿದ್ದಾಂತಗಳನ್ನು ಮಾರಿಕೊಳ್ಳುತ್ತಿದ್ದೀರಾ. ಅದು ಬಿಜೆಪಿಗೆ ವಿರುದ್ಧವಾಗಿರುವ ಕಾಂಗ್ರೆಸ್‍ ಗೆ ಇದು ಸರಿಯಲ್ಲ. ಮತ್ತೊಮ್ಮೆ ಯೋಚಿಸಿ ಎಂದರು.

key words: Jagdish Shettar – think- again- come back -BJP – KS Eshwarappa