ನಾನು ಮತ್ತು ಸವದಿ ಪಕ್ಷ ತೊರೆದಿದ್ದರಿಂದ ಬಿಜೆಪಿಗೆ ಹಾನಿ: ಪ್ಯಾಚ್ ಅಪ್ ಮಾಡಲು ಆಗಲ್ಲ-ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಹುಬ್ಬಳ್ಳಿ,ಏಪ್ರಿಲ್,17,2023(www.justkannada.in): ನಾನು ಮತ್ತು ಲಕ್ಷ್ಮಣ್  ಸವದಿ ಪಕ್ಷ ತೊರೆದಿದ್ದರಿಂದ ಬಿಹೆಪಿಗೆ ಹಾನಿಯಾಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾಗೆ ಪ್ಯಾಚ್ ಅಪ್ ಮಾಡಲು ಆಗಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಜಗದೀಶ್ ಶೆಟ್ಟರ್,  ಈ ಬಾರಿ ಬಿಜೆಪಿಗೆ ಅಧಿಕಾರಕ್ಕೆ ಬರುವ ಅವಕಾಶವಿತ್ತು.  ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನ್ನಿಸುತ್ತಿದೆ.   ಹಾಗಾಗಿಯೇ ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ದ 1 ವರ್ಷದಿಂದ ಷಡ್ಯಂತ್ರ ಮಾಡಿಕೊಂಡು ಬಂದಿದ್ದಾರೆ. ಬಿಜೆಪಿಯವರೇ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ- ಕಾಂಗ್ರೆಸ್ ನಲ್ಲಿ ನನಗೆ ಯಾವುದೇ ವ್ಯತ್ಯಾಸ ವ್ಯತ್ಯಾಸ ಕಂಡಿಲ್ಲ. ಕುಸುಮಾ ಶಿವಳ್ಳಿ ಪ್ರಚಾರಕ್ಕೆ ಬರಬೇಕೆಂದು ಆಹ್ವಾನಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Key words: Damage -BJP – Can’t be- patched up-Former CM -Jagdish Shettar.