ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗುವ ವಿಶ್ವಾಸವಿದೆ: ಕಾಂಗ್ರೆಸ್ ಯೂಸ್ ಅಂಡ್ ಥ್ರೋ ಪಕ್ಷ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ,ಏಪ್ರಿಲ್,14,2023(www.justkannada.in):  ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಎಲ್ಲವೂ ಸುಲಲಿತವಾಗಿ ಪರಿಹಾರವಾಗುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿಯಲ್ಲಿ 52 ಹೊಸಮುಖಗಳಿಗೆ ಟಿಕೆಟ್ ನೀಡಲಾಗಿದೆ.  ಕಾಂಗ್ರೆಸ್ ನಂತೆ ಅಪ್ಪ ಮಕ್ಕಳಿಗೆ ಟಿಕೆಟ್ ನೀಡಿಲ್ಲ. ಲಕ್ಷ್ಮಣ್ ಸವದಿ ಕಾಂಗ್ರೆಸ್ ಗೆ ಹೋಗಬಾರದು ಎಂದು ನಮ್ಮ ಆಪೇಕ್ಷೆ. ಸವದಿಗೆ ನಮ್ಮ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಪರಾಜಿತ ಸವದಿಯನ್ನ ನಮ್ಮ ಪಕ್ಷ ಡಿಸಿಎಂ ಮಾಡಿತ್ತು. ಕಾಂಗ್ರೆಸ್  ಯೂಸ್  ಅಂಡ್ ಥ್ರೋ ಪಕ್ಷ . ಬಿಜೆಪಿಯಲ್ಲಿ ಭವಿಷ್ಯ ಇತ್ತು.  ದಯವಿಟ್ಟು ಅಲ್ಲಿಗೆ ಹೋಗಬೇಡಿ ಎಂದು ಮನವಿ ಮಾಡಿದರು.

ಟಿಕೆಟ್ ಕೈತಪ್ಪಿದ್ದಕ್ಕೆ ಹಲವು ಮುಖಂಡರು ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಯಾವ ಪಾರ್ಟಿ ಗೆಲ್ಲುತ್ತೆ ಅ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿರುತ್ತಾರೆ. 90 ಪರ್ಸೆಂಟ್ ಇಂದು ಅಥವಾ ನಾಳೆ ಸಮಸ್ಯೆ ಬಗೆಹರಿಯುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: Jagdish Shettar -confident – ticket-Union Minister -Prahlad Joshi