ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆ ಖಚಿತ ಪಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್.

ಬೆಳಗಾವಿ,ಏಪ್ರಿಲ್,14,2023(www.justkannada.in):  ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆಯಲು ನಿರ್ಧರಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದ್ದು ಇದನ್ನ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಖಚಿತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಲಕ್ಷ್ಮಣ್ ಸವದಿ ರಾಜ್ಯ ಮಟ್ಟದ ಪ್ರಭಾವಿ ನಾಯಕ ಸವದಿ ಕಾಂಗ್ರೆಸ್ ಗೆ ಬರಲಿ ಸ್ವಾಗತ ಮಾಡುತ್ತೇವೆ.  ಜಿಲ್ಲಾ ನಾಯಕರೆಲ್ಲ ಕೂಡಿ ಅವರನ್ನ ಸ್ವಾಗತಿಸುತ್ತಿದ್ದಾರೆ.  ಲಕ್ಷ್ಮಣ್ ಸವದಿ ಕಾಂಗ್ರೆಸ್ ಗೆ ಬಂದರೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ  ಬಲ ಬಂದಂತಾಗುತ್ತದೆ ಎಂದರು.

ಹಾಗೆಯೇ  ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಕೂಡ  ಹೈಕಮಾಂಡ್ ಜೊತೆ  ಸಂಪರ್ಕದಲ್ಲಿರುಬಹುದು. ಮುಂದಿನ ದಿನಗಳಲ್ಲಿ ಯಾರೆಲ್ಲಾ ಬರ್ತಾರೆ ನೋಡೋಣ. ಜೊತೆಯ ಮಾತುಕತೆ ಆಗಿದೆ ಎಂದರು.

Key words: MLA- Lakshmi Hebbalkar- confirmed – join -Laxman Savadi -Congress.