ವರುಣಾ ಕ್ಷೇತ್ರ ಗೆಲ್ಲಲು ರಣತಂತ್ರ: ಮಾಜಿ ಸಿಎಂ ಬಿಎಸ್ ವೈ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ಭೇಟಿ ಮಾಡಿ ಚರ್ಚಿಸಿ ಸಚಿವ ವಿ.ಸೋಮಣ್ಣ.

ಮೈಸೂರು,ಏಪ್ರಿಲ್,14,2023(www.justkannada.in):  ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧಿಗಿಳಿಯುತ್ತಿರುವ ಸಚಿವ ವಿ.ಸೋಮಣ್ಣ ಗೆಲುವು ಸಾಧಿಸುವುದಕ್ಕಾಗಿ ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಈ ನಡುವೆ ಇಂದು ಸೋಮಣ್ಣ ವರುಣಾ ಅವರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ಅವರನ್ನ ಭೇಟಿ ಮಾಡಿದ್ದಾರೆ.

ಸಚಿವ ಸೋಮಣ್ಣ ಕಾ.ಪು ಸಿದ್ದಲಿಂಗಸ್ವಾಮಿ ಅವರನ್ನು  ಭೇಟಿಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಭೇಟಿ ಬಳಿಕ ಮಾತನಾಡಿದ  ಸಚಿವ ವಿ ಸೋಮಣ್ಣ ಅವರು,  ಕಾಪು ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದ ಹಾಗೆ. ಸಿದ್ದಲಿಂಗಸ್ವಾಮಿಯವರಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ. ಇಂದಿನಿಂದ ವರುಣ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಒಂದು ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ. ವರುಣಾವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ಅವರಿಗೆ ತವರು ಕ್ಷೇತ್ರ ಗೋವಿಂದರಾಜ ನಗರ  ಕ್ಷೇತ್ರದ ಟಿಕೆಟ್​ ಕೈ ತಪ್ಪಿದ್ದು,  ಆದರೆ ವರುಣಾ  ಮತ್ತು ಚಾಮರಾಜನಗರ  ಕ್ಷೇತ್ರದ ಟಿಕೆಟ್​ ಲಭಿಸಿದೆ.

Key words: Varuna –Constituency- Minister- V. Somanna –meet-kapu Siddalingaswamy.