ಜಾಕಿ ಚಾನ್ ಸೆಕೆಂಡ್ ಇನ್ನಿಂಗ್ಸ್! ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಸೇರಲಿದ್ದಾರೆ ಸೂಪರ್ ಸ್ಟಾರ್

ಬೆಂಗಳೂರು, ಜುಲೈ 16, 2021 (www.justkannada.in): ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಸೇರುವುದಾಗಿ ಜಾಕಿ ಚಾನ್ ತಿಳಿಸಿದ್ದಾರೆ.

ಹೌದು. ಸೂಪರ್ ಸ್ಟಾರ್ ಜಾಕಿ ಚಾನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಂಕಾಂಗ್ ಮೂಲದ ಹಾಲಿವುಡ್‌ನ ಖ್ಯಾತ ನಟ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಸೇರಲಿದ್ದಾರೆ.

ಚೀನಾ ಫಿಲ್ಮ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿರುವ ಜಾಕಿ ಚಾನ್, ಅಂದು ನಡೆದ ವಿಚಾರ ಸಂಕೀರಣದಲ್ಲಿ ಭಾಗವಹಿಸಿದ ಗಣ್ಯರಲ್ಲಿ ಜಾಕಿ ಚಾನ್ ಕೂಡ ಒಬ್ಬರು. ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಹೋರಾಟದ ಮೇಲೆ ಚೀನಾ ಸರ್ಕಾರ ನಡೆಸುತ್ತಿರುವ ದೌರ್ಜನ್ಯವನ್ನು ಜಾಕಿ ಚಾನ್ ಬೆಂಬಲಿಸಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾಕಿ ಚಾನ್ ಅವರ ಮುಂದಿನ ಸಿನಿಮಾ ‘ಸ್ನಾಫು’ ಬಿಡುಗಡೆಗೆ ಕಾಯುತ್ತಿದ್ದಾರೆ. WWE ಸ್ಟಾರ್ ಜಾನ್ ಸೇನಾ ನಟಿಸಿದ್ದಾರೆ. ಇನ್ನು ದಿ ಡೈರಿ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.