ರಾಜಮೌಳಿ RRR ಮೇಕಿಂಗ್ ವೀಡಿಯೋ ವೈರಲ್ !

ಬೆಂಗಳೂರು, ಜುಲೈ 16, 2021 (www.justkannada.in): ರಾಜಮೌಳಿ ನಿರ್ದೇಶನದಲ್ಲಿ ಜೂನಿಯರ್ ಎನ್​ಟಿಆರ್​ ಹಾಗೂ ರಾಮ್​ ಚರಣ್​ ತೇಜ ನಟನೆಯ ಆರ್​ಆರ್​ಆರ್​ ಚಿತ್ರತಂಡ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದ್ದು, ವೈರಲ್ ಆಗಿದೆ.

ಬಾಹುಬಲಿ ತಂಡವೇ ಈ ಚಿತ್ರದಲ್ಲೂ ಕೆಲಸ ಮಾಡುತ್ತಿದೆ. ಇನ್ನು ಈ ವಿಡಿಯೋ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡಿದೆ.

ರಾಮ್​ ಚರಣ್​ ಹುಟ್ಟುಹಬ್ಬಕ್ಕೆ ರಾಮರಾಜು ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಮಾಡಲಾಗಿತ್ತು. ಈ ವಿಡಿಯೋಗೆ ಎನ್​ಟಿಆರ್​ ಕಂಠದಾನ ಮಾಡಿದ್ದರು. ಮಲಯಾಳಂ ಒಂದು ಭಾಷೆಯಲ್ಲಿ ಮಾತ್ರ ಬೇರೆಯವರ ದನಿಯಿತ್ತು.

ಅಂದಾಜು 400 ಕೋಟಿ ಬಜೆಟ್​ನಲ್ಲಿ ಆರ್​ಆರ್​ಆರ್​ ಸಿನಿಮಾ ರಿಲೀಸ್ ಆಗಲಿದೆ. ಇದರಲ್ಲಿ ಹಾಲಿವುಡ್​ ಹಾಗೂ ಬಾಲಿವುಡ್​ ಸ್ಟಾರ್​ಗಳೂ ನಟಿಸುತ್ತಿದ್ದಾರೆ.  ಆಲಿಯಾ ಭಟ್​ ಹಾಗೂ ಅಜಯ್​ ದೇವಗನ್​ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.