‘ಕರೀನಾ ಕಪೂರ್ ಖಾನ್’ಸ್ ಪ್ರೆಗ್ನೆನ್ಸಿ ಬೈಬಲ್’: ಕರೀನಾ ಕಪೂರ್ ವಿರುದ್ಧ ದೂರು ದಾಖಲು !

ಬೆಂಗಳೂರು, ಜುಲೈ 16, 2021 (www.justkannada.in): ನಟಿ ಕರೀನಾ ಕಪೂರ್ ವಿರುದ್ಧ ಮಹಾರಾಷ್ಟ್ರದ ಬೀಡ್ ನಗರದ ಪೊಲೀಸ್ ಠಾಣೆಯೊಂದರಲ್ಲಿ ಗುಂಪೊಂದು ದೂರು ನೀಡಿದೆ.

ಗರ್ಭಿಣಿ ಆಗಿದ್ದಾಗಿನ ಅನುಭವಗಳು, ತಾಯಿಯಾಗುವ ಪಯಣದ ಮಹತ್ವ, ತೆಗೆದುಕೊಳ್ಳಬೇಕಾದ ಎಚ್ಚರಿಕೆ ಇತರೆ ವಿಷಯಗಳನ್ನು ಸೇರಿಸಿ ಪುಸ್ತಕವೊಂದನ್ನು ಹೊರತಂದಿದ್ದರು. ಅದಕ್ಕೆ ‘ಕರೀನಾ ಕಪೂರ್ ಖಾನ್‌’ಸ್ ಪ್ರೆಗ್ನೆನ್ಸಿ ಬೈಬಲ್’ ಎಂದು ಹೆಸರಿಟ್ಟಿದ್ದರು.

ಈ ಹೆಸರು ಕೆಲವರಿಗೆ ಇಷ್ಟವಾಗಿಲ್ಲ. ಮಹಾರಾಷ್ಟ್ರದ ಬಿಡೆಯಲ್ಲಿನ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘದ ಸದಸ್ಯರು ಕರೀನಾ ಕಪೂರ್ ವಿರುದ್ಧ ನಗರದ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.

ರೀನಾ ಕಪೂರ್ ಹಾಗೂ ಆ ಪುಸ್ತಕದ ಮತ್ತೊಬ್ಬ ಲೇಖಕಿಯ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕ ದುಷ್ಕೃತ್ಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದು, ಮತ್ತೊಬ್ಬರ ಧರ್ಮವನ್ನು ಅವಹೇಳನ ಮಾಡುವುದು) ಎಂದು ಒತ್ತಾಯಿಸಲಾಗಿದೆ.