Wednesday, October 14, 2026

Dasara Wishes

Happy Dasara
Home Front Page ಕಾನೂನಿನ ಪ್ರಕಾರವೇ ಐಟಿ ದಾಳಿ: ರಾಜಕೀಯ ಬೆರೆಸಲು ಹೋಗಲ್ಲ ಅಂದ್ರು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್…

ಕಾನೂನಿನ ಪ್ರಕಾರವೇ ಐಟಿ ದಾಳಿ: ರಾಜಕೀಯ ಬೆರೆಸಲು ಹೋಗಲ್ಲ ಅಂದ್ರು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್…

ಬೆಂಗಳೂರು,ಅ,12,2019(www.justkannada.in):  ಕಾನೂನಿನ ಪ್ರಕಾರವೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆ ರಾಜಕೀಯ ಲೇಪನ ಬಳಿಯಲು ಹೋಗಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತಮ್ಮ ಶಿಕ್ಷಣ ಸಂಸ್ಥೆ ನಿವಾಸದ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ವಿದ್ಯಾರ್ಥಿಗಳ ದೂರಿನ ಮೇರೆಗೆ ಐಟಿ ದಾಳಿ ನಡೆದಿದೆ.  ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಗೆ ಹಾಜರಾಗಿ ಎಲ್ಲದಕ್ಕೂ ಉತ್ತರಿಸಲು ಸಿದ್ಧನಿದ್ದೇನೆ. ಕಾರ್ಯಕರ್ತರು, ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು. ಇದಕ್ಕೆ ಪ್ರತಿಭಟನೆ ಮಾಡಬಾರದು ಎಂದು ಮನವಿ ಮಾಡಿದರು.

ಸಿದ್ದಾರ್ಥ ಕಾಲೇಜು ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲು ನನ್ನ ಸಹೋದರ ಕಾಲೇಜು ಜವಾಬ್ದಾರಿ ಹೊತ್ತಿದ್ದರು. ಈಗ ಕಳೆದ ಆರು ತಿಂಗಳಿಂದ ನಾನು ಜವಾಬ್ದಾರಿ ಪಡೆದಿದ್ದೇನೆ. ಕಾಲೇಜಿನಲ್ಲಿ ದಾಖಲಾತಿ ವಿಚಾರವಾಗಿ ನನಗೆ ಗೊತ್ತಿಲ್ಲ. ಕಾಲೇಜ್ ಕಡೆಯಿಂದ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದ್ದೆ ಎಂದರು.

Key words: IT -attacks – law- Former DCM- Dr G Parameshwar -not – mix politics