ಪತ್ರಕರ್ತರ ಆರೋಗ್ಯ ರಕ್ಷಣೆಗೆ ಹೆಲ್ತ್ ಕಾರ್ಡ್ ನೀಡಲು ಕ್ರಮ- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ಬೆಂಗಳೂರು,ನ,10,2019(www.justkannada.in):  ಪತ್ರಕರ್ತರ ಆರೋಗ್ಯ ರಕ್ಷಣೆಗೆ ಹೆಲ್ತ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಬೆಂಗಳೂರಿನ ವೀರಭದ್ರನಗರದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ ಸುವರ್ಣಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದರು. ಸುವರ್ಣ ಭವನ ನಿರ್ಮಾಣಕ್ಕೆ ಸಿದ್ಧರಾಮಯ್ಯ ಒಪ್ಪಿಗೆ ನೀಡಿದ್ದರು. ಹೆಚ್.ಡಿ ಕುಮಾರಸ್ವಾಮಿ ಹಣ ಮಂಜೂರು ಮಾಡಿದ್ದರು.  ನಿಗದಿತ ಸಮಯದಲ್ಲಿ ಸುವರ್ಣ ಭವನ ನಿರ್ಮಾಣವಾಗಲಿ. ಪತ್ರಕರ್ತರಿಗೆ ಅನುಕೂಲವಾಗಲಿ ಎಂದರು.

ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸಂಬಂಧ ಉತ್ತಮವಾಗಿದೆ. ಪತ್ರಕರ್ತರ ಆರೋಗ್ಯ ರಕ್ಷಣೆಗೆ ಹೆಲ್ತ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

Key words: issue- health card – journalists- health care- cm bs yeddyurappa