ರಾಜುಕಾಗೆ ಮತ್ತು ಅಶೋಕ್  ಪೂಜಾರಿ ಅವರಿಂದ ಡಿ.ಕೆ ಶಿವಕುಮಾರ್ ಭೇಟಿ ವಿಚಾರ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು ಹೀಗೆ…?

ಚಿಕ್ಕಮಗಳೂರು,ನ,10,2019(www.justkannada.in):  ಬಿಜೆಪಿ ಮುಖಂಡರಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜುಕಾಗೆ ಕಾಂಗ್ರೆಸ್ ಸೇರ್ಪಡೆಯಾಗಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ರಾಜಕೀಯದಲ್ಲಿ  ವೈಯಕ್ತಿಕ ಸಂಬಂಧಗಳು ಇರುತ್ತವೆ. ಹೀಗಾಗಿ ರಾಜುಕಾಗೆ ಅಶೋಕ್ ಪೂಜಾರಿ ಅವರು ಡಿಕೆ ಶಿವಕುಮಾರ್ ಭೇಟಿಯಾಗಿರುವ ಸಾಧ್ಯತೆ ಇದೆ. ಸಂಬಂಧ ಇದ್ಧಕೂಡಲೇ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಲ್ಲ ಎಂದು ತಿಳಿಸಿದರು.

ನಾನು ಮತ್ತು ಜನಾರ್ಧನ ಪೂಜಾರಿ ಇಬ್ಬರೂ ಹಳೆಯ ಸ್ನೇಹಿತರು ಆದರೆ ಅವರು ಬಿಜೆಪಿಗೆ ಬರಲಿಲ್ಲ. ನಾನು ಕಾಂಗ್ರೆಸ್ ಗೆ ಹೋಗಲಿಲ್ಲ ಎಂದು ನಳೀನ್ ಕುಮಾರ್ ಕಟೀಲ್  ಎಂದು ಹೇಳುವ ಮೂಲಕ ರಾಜುಕಾಗೆ ಕಾಂಗ್ರೆಸ್ ಸೇರ್ಪಡೆ ವಿಚಾರ ತಳ್ಳಿ ಹಾಕಿದರು.

Key words: chikkamagalur-bjp state president- nalin kumar katil- reaction- rajukage-meet- dk shivakumar