Monday, September 21, 2026

BDA Apartments

ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ಧ ಐಸಿಸ್ ಉಗ್ರನ ಬಂಧನ BDA JK_Adv BDA Adv
Home Crime ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ಧ ಐಸಿಸ್  ಉಗ್ರನ ಬಂಧನ.

ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ಧ ಐಸಿಸ್  ಉಗ್ರನ ಬಂಧನ.

ಮಾಸ್ಕೊ,ಆಗಸ್ಟ್,22,2022(www.justkannada.in):  ಭಾರತ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ಧ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಉಗ್ರನನ್ನ ರಷ್ಯಾದಲ್ಲಿ ಬಂಧಿಸಲಾಗಿದೆ.

ರಷ್ಯನ್ ಫೆಡರಲ್ ಸೆಕ್ಯೂರಿಟಿ ಸರ್ವೀಸ್ ನಿಂದ ಉಗ್ರನ ಬಂಧನವಾಗಿದೆ.  ಈತ ಭಾರತದ ಆಡಳಿತದ ನಾಯಕರ ಮೇಲೆ ದಾಳಿಗೆ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ.  ಭಾರತದ ಸ್ಥಳೀಯರು, ಆಡಳಿತ ವಲಯದ ಪ್ರತಿನಿಧಿಗಳನ್ನು ಗುರಿಯಾಗಿರಿಸಿ ಆತ್ಮಾಹುತಿ ದಾಳಿ ಮೂಲಕ ಭಯೋತ್ಪಾದಕ ಕೃತ್ಯವನ್ನು ಎಸಗಲು ಯೋಜಿಸಿದ್ದ ಎಂದು ಎಫ್‌ಎಸ್‌ಬಿ ಹೇಳಿಕೆಯಲ್ಲಿ ತಿಳಿಸಿದೆ.

ಬಂಧಿತ ವ್ಯಕ್ತಿಯನ್ನು ಐಎಸ್ ನಾಯಕರೊಬ್ಬರು ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದ್ದರು ಎಂದು ಹೇಳಿಕೆ ತಿಳಿಸಿದೆ.

Key words: ISIS –terrorist- arrested – Russia- India.