Saturday, October 17, 2026

Dasara Wishes

Happy Dasara
Home Front Page ವರ್ಗಾವಣೆ ಕುರಿತು ಬೀದಿಯಲ್ಲಿ ಕುಳಿತು ಚರ್ಚಿಸಲು ಸಾಧ್ಯವೇ ..? ಗೃಹಸಚಿವ ಡಾ.ಜಿ.ಪರಮೇಶ್ವರ್

ವರ್ಗಾವಣೆ ಕುರಿತು ಬೀದಿಯಲ್ಲಿ ಕುಳಿತು ಚರ್ಚಿಸಲು ಸಾಧ್ಯವೇ ..? ಗೃಹಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಆಗಸ್ಟ್,1,2023(www.justkannada.in): ವರ್ಗಾವಣೆ ಬಗ್ಗೆ ಸಿಎಂ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದೇನೆ. ವರ್ಗಾವಣೆ ಕುರಿತು  ಬೀದಿಯಲ್ಲಿ ಕುಳಿತು ಚರ್ಚಿಸಲು ಸಾಧ್ಯವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ವರ್ಗಾವಣೆ ಕುರಿತು ಹಿಂದೆಯೂ ಮಾತನಾಡಿದ್ದೇವೆ. ಮುಂದೆಯೂ ರಹಸ್ಯವಾಗಿಯೇ ಚರ್ಚೆ ಮಾಡುತ್ತೇವೆ. ಇಂತಹ ವಿಚಾರಗಳನ್ನ ಬೀದಿಯಲ್ಲಿ ಕುಳಿತು ಚರ್ಚಿಸಲು ಆಗುತ್ತಾ..?  ಎಂದು ಪ್ರಶ್ನಿಸಿದರು.

ನೈತಿಕ ಪೊಲೀಸ್ ಗಿರಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ನೈತಿಕ ಪೊಲೀಸ್ ನಿಯಂತ್ರಣಕ್ಕೆ ಪ್ರತ್ಯೇಕ ಘಟಕ ಸ್ಥಾಪನೆ ಮಾಡಲಾಗುತ್ತದೆ.  ಮತ್ತೆ ಇಂತಹ ಘಟನೆ ಆಗಬಾರದು ಯಾವುದೇ ಧರ್ಮದವರು ಇದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ.  ಯಾರೇ ನೈತಿಕ ಪೊಲೀಸ್ ಗಿರಿ ಮಾಡಿದ್ರೂ ಕ್ರಮ ಆಗಲಿದೆ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.

Key words: Is it possible – sit – street – discuss –transfer-Home Minister- Dr. G. Parameshwar