Sunday, August 23, 2026

BDA Apartments

Home Front Page ಐಪಿಎಲ್: ಕೋಲ್ಕೊತ್ತಾ ನೈಟ್ ರೈಡರ್ಸ್- ಡೆಲ್ಲಿ ಕ್ಯಾಪಿಟಲ್ಸ್ ಫೈಟ್ ಇಂದು

ಐಪಿಎಲ್: ಕೋಲ್ಕೊತ್ತಾ ನೈಟ್ ರೈಡರ್ಸ್- ಡೆಲ್ಲಿ ಕ್ಯಾಪಿಟಲ್ಸ್ ಫೈಟ್ ಇಂದು

ಬೆಂಗಳೂರು, ಸೆಪ್ಟೆಂಬರ್ 28, 2021 (www.justkannada.in): ಇಂದು ರಿಷಬ್ ಪಂತ್ ಪಡೆ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವಿಗಾಗಿ ಪೈಪೋಟಿ ನಡೆಸಲಿದೆ. ಈ ಪಂದ್ಯ ಮತ್ತೊಂದು ವಿಷಯಕ್ಕಾಗಿ ಮತ್ತಷ್ಟು ಮಹತ್ವ ಪಡೆದಿದೆ.

ಹೌದು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಅಗ್ರ ಸ್ಥಾನಕ್ಕಾಗಿ ಕುರ್ಚಿಯಾಟ ಮುಂದುವರಿದಿದೆ. ಇದೀಗ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ ಮರಳಿ ಪಡೆಯಲು ಅವಕಾಶ ಸಿಕ್ಕಿದೆ.

ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿರುವ ಕೆಕೆಆರ್ ಗೆ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತಿತ್ತು. ಹೀಗಾಗಿ ತನ್ನ ಸ್ಥಾನ ಉಳಿಸಿಕೊಳ್ಳಲು ಈ ಗೆಲುವು ಅನಿವಾರ್ಯವಾಗಿದೆ.

ಡೆಲ್ಲಿ ಪ್ರಬಲ ತಂಡವಾಗಿ ಕಂಡರೂ ಶಿಖರ್ ಧವನ್, ಪೃಥ‍್ವಿ ಶಾ ಫಾರ್ಮ್ ನಲ್ಲಿರುವುದು ಚಿಂತೆಗೀಡು ಮಾಡಿದೆ. ರಿಷಬ್ ಪಂತ್ ಕೂಡ ಹೆಚ್ಚು ರನ್ ಗಳಿಸಿದರೆ ಗೆಲುವು ಸುಲಭವಾಗಲಿದೆ.ಇಂದಿನ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

key words: IPL: Kolkata Knight Riders – Delhi Capitals Fight Today