“ಬೆಹತರ್‌ ಭಾರತ್‌ ಬುನಿಯಾದಿ” ಸಮಾವೇಶಕ್ಕೆ ಸಿಎಂ ಸಿದ್ಧರಾಮಯ್ಯಗೆ ಆಹ್ವಾನ.

ಬೆಂಗಳೂರು, ಜೂ,30,2023(www.justkannada.in): ರಾಷ್ಟ್ರೀಯ ಯುವ ಕಾಂಗ್ರೆಸ್‌ ನಿಂದ ಮುಂದಿನ ತಿಂಗಳು ನಡೆಯಲಿರುವ “ಬೆಹತರ್‌ ಭಾರತ್‌ ಬುನಿಯಾದಿ” ರಾಷ್ಟ್ರೀಯ ಕಾರ್ಯಕ್ರಮ ಉದ್ಘಾಟಿಸುವಂತೆ ಯುವ ಕಾಂಗ್ರೆಸ್‌ ನಿಯೋಗ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರಿಗೆ ಆಹ್ವಾನ ನೀಡಿದೆ.

ಎಐಸಿಸಿ ಜಂಟಿ ಕಾರ್ಯದರ್ಶಿ ಯುವ ಕಾಂಗ್ರೆಸ್ ನ  ಉಸ್ತುವಾರಿ ಕೃಷ್ಣ ಅಳವಾರು, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಸದಸ್ಯರಾದ ಎಂ.ಎಸ್.‌ ರಕ್ಷಾ ರಾಮಯ್ಯ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

ಬೆಹತರ್‌ ಭಾರತ್‌ ಬುನಿಯಾದಿ” ಸಮಾವೇಶವನ್ನು ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಸುತ್ತಿದ್ದು, ಯುವ ಸಮೂಹದ ಮೂಲಕ ದೇಶದಲ್ಲಿ ಯುವ ಶಕ್ತಿಯನ್ನು ಸೂಕ್ತ ದಿಕ್ಕಿನತ್ತ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅತಿ ದೊಡ್ಡ ಯುವ ಸಮಾವೇಶ ಇದಾಗಿದ್ದು, ಮೂರು ದಿನಗಳ ಪಕ್ಷದ ಹಿರಿಯ ಮುಖಂಡರು, ತಜ್ಞರು ವಿವಿಧ ವಿಷಯಗಳ ಬಗ್ಗೆ ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ರಕ್ಷಾ ರಾಮಯ್ಯ ತಿಳಿಸಿದ್ದಾರೆ.

ENGLISH SUMMARY..

Chief Minister Siddaramaiah invited to inaugurate “Behtar Bharat Buniyadi” convention – a three-day program by National Youth Congress next month

Bangalore, June 30; The Youth Congress delegation has invited Chief Minister Siddaramaiah to inaugurate the national program “Behtar Bharat Buniyadi” to be held next month by the National Youth Congress.

AICC Joint Secretary and youth Congress in charge , Krishna Alavaru, Youth Congress National President B.V. Srinivas and Rashtriya Yuva Congress General Secretary, AICC member M.S Raksha Ramaiah met the Chief Minister and submitted a request. Chief Minister’s Political Secretary Govindaraju was present on the occasion.

The “Behtar Bharat Buniyadi” conference is being held in Bangalore for three days and aims to take the youth power in the country in the right direction through the youth group.

Raksha Ramaiah said that this is the biggest youth conference being held as a prelude to the upcoming Lok Sabha elections, and senior party leaders and experts will guide the youth group on various issues for three days.

Key words: Invitation – CM- Siddaramaiah -Behtar Bharat Buniyadi -convention.