Thursday, September 17, 2026

BDA Apartments

ಕೊರೋನಾ ಸೋಂಕಿತ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ವಾ...
Home Front Page ಕೊರೋನಾ ಸೋಂಕಿತ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ...

ಕೊರೋನಾ ಸೋಂಕಿತ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ. ಎಸ್ ಹರ್ಷ…

ಬೆಂಗಳೂರು, ಆ,11,2020(www.justkannada.in):  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿ ಒಳಗೊಂಡಂತೆ 21 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಲಾಖಾ ಆಯುಕ್ತ ಡಾ ಪಿ ಎಸ್ ಹರ್ಷ ಅವರು ನಗರದ ವಿವಿಧೆಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಜೂಮ್ ಸಮ್ಮೇಳನದ ಮೂಲಕ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಿದರು.jk-logo-justkannada-logo

ಸ್ವತಃ ವೈದ್ಯರೂ ಆಗಿರುವ ಡಾ ಹರ್ಷ ಅವರು ಈ ಸೋಂಕು ಕುರಿತು ಭಯಪಡುವ ಅಗತ್ಯವಿಲ್ಲ. ಅಂತೆಯೇ, ಈ ಸೋಂಕನ್ನು ಯಾರೂ ನಿರ್ಲಕ್ಷಿಸುವಂತೆಯೂ ಇಲ್ಲ. ಸಕಾಲಿಕ ಚಿಕಿತ್ಸೆ ಅತ್ಯಾವಶ್ಯಕ. ವೈದ್ಯರು ನೀಡುತ್ತಿರುವ ಔಷಧಿ ಹಾಗೂ ಮಾತ್ರೆಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಿ. ಶೀಘ್ರವೇ ಗುಣಮುಖರಾಗುವಿರಿ. ಸಂಕಷ್ಟದ ಕಾಲದಲ್ಲಿ ನೀವು ಒಬ್ಬಂಟಿಯಲ್ಲ ! ಇಲಾಖೆ ತಮ್ಮ ಜೊತೆಗಿದೆ ಎಂದು ಧೈರ್ಯ ತುಂಬಿದರು.coroner-infect-officer-staff-department-information-and-public-relations-commissioneರ-dr-p-s-harsha

Key words: Coroner –Infect- Officer-staff- Department – Information and Public Relations-Commissioner-Dr. P. S Harsha