Sunday, August 16, 2026

BDA Apartments

Home Front Page ಪತ್ರಕರ್ತರಿಗೆ ಗಿಫ್ಟ್  ಬಗ್ಗೆ ತನಿಖೆಯಾಗಿ ಹಣದ ಮೂಲ ಪತ್ತೆಯಾಗಬೇಕು- ಮಾಜಿ ಸಿಎಂ ಸಿದ‍್ಧರಾಮಯ್ಯ ಆಗ್ರಹ.

ಪತ್ರಕರ್ತರಿಗೆ ಗಿಫ್ಟ್  ಬಗ್ಗೆ ತನಿಖೆಯಾಗಿ ಹಣದ ಮೂಲ ಪತ್ತೆಯಾಗಬೇಕು- ಮಾಜಿ ಸಿಎಂ ಸಿದ‍್ಧರಾಮಯ್ಯ ಆಗ್ರಹ.

ಮೈಸೂರು,ಅಕ್ಟೋಬರ್,31,2022(www.justkannada.in):  ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಪತ್ರಕರ್ತರಿಗೆ ಗಿಫ್ಟ್ ಮೂಲಕ ಹಣ ಹಂಚೊದ್ಧಾರೆ. ಈ ಬಗ್ಗೆ ತನಿಖೆಯಾಗಬೇಕು. ಹಣದ ಮೂಲ ಪತ್ತೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಸಾಬೀತಾಗಿದೆ. ಸರ್ಕಾರದಿಂದ 40 ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಹಗರಣಗಳನ್ನ ಬಿಂಬಿಸದಂತೆ ಪತ್ರಕರ್ತರಿಗೆ ಗಿಫ್ಟ್ ಮೂಲಕ ಹಣ ನೀಡಿದ್ದಾರೆ  ‘ ತಪ್ಪು ಮುಚ್ಚಿಕೊಳ್ಳಲು ಬಿಜೆಪಿಯವರು ಪತ್ರಕರ್ತರಿಗೆ ಗಿಫ್ಟ್ ಮೂಲಕ ಹಣ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಹಣದ ಮೂಲ ಪತ್ತೆಯಾಗಬೇಕು. ’ಬಿಜೆಪಿಯವರು ಮಹಾನ್ ಭ್ರಷ್ಟರು ಭಂಡರು , ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. dda

ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಈಗಾಗಲೇ ಕಾಂಗ್ರೆಸ್ ಅಭ್ಯರ್ಥೀಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ನವೆಂಬರ್ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುತ್ತದೆ ಎಂದು ತಿಳಿಸಿದರು.

Key words: Investigate – gift – journalist-Former CM- Siddharramaiah-mysore