ಪರಿಹಾರ ಕೇಂದ್ರ ಖಾಲಿ ಮಾಡಲು ಅಧಿಕಾರಿಗಳ ಸೂಚನೆ: ನೆರೆ ಸಂತ್ರಸ್ತರು ಕಂಗಾಲು…

ಬೆಳಗಾವಿ,ಆ,19,2019(www.justkannada.in): ಪರಿಹಾರಕೇಂದ್ರ ಖಾಲಿ ಮಾಡುವಂತೆ ಧಾರಾಕಾರಮ ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡು  ಪರಿಹಾರ ಕೇಂದ್ರಲ್ಲಿದ್ದ ನೆರೆ ಸಂತ್ರಸ್ತಿಗೆ ಅಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆ ನೆರೆ ಸಂತ್ರಸ್ತರು ಕಂಗಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದ ಪರಿಹಾರ ಕೇಂದ್ರದಲ್ಲಿ ಈ ಘಟನೆ ನಡೆದಿದೆ.  ಪರಿಹಾರಕೇಂದ್ರ ಖಾಲಿ ಮಾಡುವಂತೆ ಇಲ್ಲಿನ ನೆರೆ ಸಂತ್ರಸ್ತರಿಗೆ ಅಧಿಕಾರಿಗಳು ಸೂಚನೆ ನೀಡಿದ್ದು, ಹೀಗಾಗಿ ಕಂಗಾಲಾಗಿರುವ ನೆರೆ ಸಂತ್ರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಭೀಕರ ಪಪ್ರವಾಹದಿಂದ  ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮನೆ ಕಳೆದುಕೊಂಡ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು.

ಇದೀಗ ಪರಿಹಾರ ಕೇಂದ್ರ ಖಾಲಿ ಮಾಡಲು ಸೂಚನೆ ನೀಡಿದ ಹಿನ್ನೆಲೆ  ಮನೆಯೂ ಇಲ್ಲದೆ ಇತ್ತ ಆಶ್ರಯವೂ ಇಲ್ಲದೆ ಸಂತ್ರಸ್ತರು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ . ಪರಿಹಾರ ಕೇಂದ್ರದಲ್ಲಿ ಇರಬೇಕೆಂದು ನಾವು ಬಯಸಿಲ್ಲ. ಇಲ್ಲಿದ್ದರೆ ನಮಗೆ ಕೂಲಿಯೂ ಸಿಗುವುದಿಲ್ಲ. ಖಾಲಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಮನೆ ಇಲ್ಲವಾಗಿದೆ. ನಮಗೆ ಮನೆಗಳನ್ನು ನಿರ್ಮಿಸಿ ಕೊಡಿ. ಇಲ್ಲದಿದ್ದರೆ ನಾವು ವಿಷ ಕುಡಿಯಬೇಕಾಗುತ್ತದೆ ಎಂದು  ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Key words: Instruction – officers – vacate -relief center-neighboring victims -belagavi