Wednesday, August 12, 2026

BDA Apartments

Home Front Page ನನಗಿರುವ ಮಾಹಿತಿ ಪ್ರಕಾರ ಯಾವ ಶಾಸಕರೂ ಕಾಂಗ್ರೆಸ್ ಗೆ ಹೋಗಲ್ಲ- ಮಾಜಿ ಸಚಿವ ಅರಗ ಜ್ಞಾನೇಂದ್ರ.

ನನಗಿರುವ ಮಾಹಿತಿ ಪ್ರಕಾರ ಯಾವ ಶಾಸಕರೂ ಕಾಂಗ್ರೆಸ್ ಗೆ ಹೋಗಲ್ಲ- ಮಾಜಿ ಸಚಿವ ಅರಗ ಜ್ಞಾನೇಂದ್ರ.

ಶಿವಮೊಗ್ಗ,ಆಗಸ್ಟ್,19,2023(www.justkannada.in):  ವಲಸೆ ಶಾಸಕರು ವಾಪಸ್ ಕಾಂಗ್ರೆಸ್ ಗೆ ಹೋಗಲಿದ್ದಾರೆಂಬ ವಿಚಾರ ಚರ್ಚೆಯಾಗುತ್ತಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಗೃಹಸಚಿವ ಅರಗಜ್ಞಾನೇಂದ್ರ, ನನಗಿರುವ ಮಾಹಿತಿ ಪ್ರಕಾರ ಯಾವ ಶಾಸಕರೂ ಕಾಂಗ್ರೆಸ್ ಗೆ ಹೋಗಲ್ಲ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅರಗ ಜ್ಞಾನೇಂದ್ರ, ಕಾಂಗ್ರೆಸ್  ಸರ್ಕಾರ ಬಂದ ಬಳಿಕ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.  ಜಲಾಶಯದಲ್ಲಿ ನೀರಲ್ಲ ಆರ್ ಟಿಪಿಎಸ್ ನಲ್ಲಿ ಕಲ್ಲಿದ್ದಲು ಇಲ್ಲ. ವಿದ್ಯುತ್ ಉತ್ಪಾದನೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಆಡಿಕೆ ಬೆಳೆಗೆ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡಿದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಗಮನಕ್ಕೆ ತಂದಿದ್ದೇವೆ. ‘ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಹೋಗಲ್ಲ ರಾಜ್ಯದ ಸಚಿವರ ವಿರುದ್ದ ಭ್ರಷ್ಟಾಚರ ಆರೋಪ ಬಂದಿದೆ. ಅದನ್ನ ಮರೆ ಮಾಚಲು ಈ ರೀತಿ ಸುದ್ದಿ ಹಬ್ಬಿಸಿದ್ದಾರೆ ಎಂದರು.

Key words: information -no MLA -Congress – Former Minister -Araga Jnanendra.