ಭಾರತ – ಅಮೇರಿಕಾ ನಡುವೆ 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ- ಜಂಟಿ ಸುದ್ದಿಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್ ಹೇಳಿಕೆ…

ನವದೆಹಲಿ,ಫೆ,25,2020(www.justkannada.in):  ಭಾರತ ಮತ್ತು ಅಮೇರಿಕಾ ನಡುವೆ ಮೂರು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದವಾಗಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.

ಭಾರತಕ್ಕೆ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು 2ನೇ ದಿನ ರಾಷ್ಟ್ರಪತಿ ಭವನಕ್ಕೆ ತೆರಳಿ ನಂತರ ರಾಜ್ ಘಾಟ್ ಗೆ ಭೇಟಿ ನೀಡಿ ಮಹಾತ್ಮಾಗಾಂಧಿ ಸ್ಮಾರಕಕಕ್ಕೆ ನಮಿಸಿದರು. ಬಳಿಕ ಹೈದರಾಬಾದ್ ಹೌಸ್ ಗೆ ಆಗಮಿಸಿದ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರ ಜತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದ ಮಾಡಿಕೊಂಡರು.

ಭಾರತ ಹಾಗೂ ಅಮೆರಿಕಾ ನಡುವೆ ಮೂರು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಸೇರಿದಂತೆ ಇತರ ಪ್ರಮುಖ ಮೂರು ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ವಿಶ್ವದ ಅತ್ಯಾಧುನಿಕ ಅಪಾಚಿ ಎಂಹೆಚ್-60 ಹೆಲಿಕಾಪ್ಟರ್ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಭಾರತೀಯ ಸೇನೆಗೆ ನೂರಾನೆ ಬಲ ಬಂದಂತಾಗಿದೆ. ಇದಲ್ಲದೇ, ಮಾನಸಿಕ ಆರೋಗ್ಯ ಕುರಿತ ದ್ವೀಪಕ್ಷಿಯ ಒಪ್ಪಂದ, ಆರೋಗ್ಯ ಉಪಕರಣಗಳ ರಕ್ಷಣೆ ಹಾಗೂ ತೈಲಕ್ಷೇತ್ರದಲ್ಲಿ ಸಹಕಾರ ಕುರಿತ ದ್ವಿಪಕ್ಷೀಯ ಒಪ್ಪಂದ ನಡೆದಿದೆ.

ಬಳಿಕ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಈ  ವೇಳೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಭೇಟಿ ನೀಡಿರುವುದಕ್ಕೆ ನನಗೆ ಬಹಳ ಖುಷಿ ಇದೆ. ನಾನು ಮೆಲಾನಿಯಾ ಭಾರತದ ಆತಿಥ್ಯಕ್ಕೆ ಮಾರುಹೋಗಿದ್ದೇವೆ.  ಭಾರತ – ಅಮೇರಿಕಾ ನಡುವೆ ಒಟ್ಟು ಮೂರು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ರಕ್ಷಣಾ ವಿಚಾರವಾಗಿ ಮೋದಿ ಜತೆ ಮಾತನಾಡಿದ್ದೇನೆ. ಒಟ್ಟು ಮೂರು ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಾಗಿದೆ . ಎರಡು ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕೆ ಸಹಮತವಿದೆ ಎಂದರು.

ಇಸ್ಲಾಮಿಕ್ ಭಯೋತ್ಪದನೆ ವಿರುದ್ದ ಎರಡು ದೇಶಗಳು ಜಂಟಿ ಹೋರಾಟ ನಡೆಸಲು ಮಾತುಕತೆ ನಡೆದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು.

ಇದೇ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್ ಭಾರತ ಭೇಟಿ ತುಂಬಾ ಖುಷಿಯಾಗಿದೆ.   ರಕ್ಷಣೆ ಸುರಕ್ಷತೆ ಬಗ್ಗೆ ಭಾರತ ಅಮೇರಿಕಾ ನಡುವೆ ಗಾಢವಾದ ಸಂಬಂಧವಿದೆ. ಭಾರತ ಮತ್ತು ಅಮೇರಿಕಾ ಸಂಬಂಧದ ಬಗ್ಗೆ ಚರ್ಚೆ ಮಾಡಿದ್ದೇವೆ.   ಭಾರತ ಅಮೇರಿಕಾ ನಡುವೆ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ರಕ್ಷಣೆ ಮತ್ತು ಭದ್ರತೆ, ಇಂಧನ ಕ್ಷೇತ್ರಗಳಲ್ಲಿ ಸಹಭಾಗಿತ್ವ ಕಾರ್ಯತಂತ್ರ , ವ್ಯಾಪಾರ ಮತ್ತಿತರ ಅಮೆರಿಕಾ- ಭಾರತ ಸಹಭಾಗಿತ್ವದ ಪ್ರತಿಯೊಂದು ಅಂಶದ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಭಯೋತ್ಪಾದಕತೆ ಬೆಂಬಲಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ- ಅಮೆರಿಕಾ ಚರ್ಚೆ ನಡೆಸಿದ್ದೇವೆ. ಮುಕ್ತ, ಪಾರದರ್ಶಕ ವ್ಯಾಪಾರಕ್ಕೆ ಒಪ್ಪಂದ, ಡ್ರಗ್ಸ್ ದಂದೆ ನಿಯಂತ್ರಣಕ್ಕೆ ಒಪ್ಪಂದ ಸೇರಿದಂತೆ ಹಲವು ಒಪ್ಪಂದವೇರ್ಪಟ್ಟಿದ್ದು, ಅಮೆರಿಕ- ಭಾರತದ ಸಂಬಂಧ ಹೊಸ ಘಟ್ಟ ತಲುಪಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Key words: India – US -$ 3 billion- defense –agreement-Donald Trump –pm narendra modi