Sunday, August 2, 2026

BDA Apartments

Home Front Page ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯ ತಾಯಿ: ಸಂವಿಧಾನದ ಬಗ್ಗೆ ಯುವಕರಿಗೆ ಜಾಗೃತಿ ಬೇಕು- ಪ್ರಧಾನಿ ಮೋದಿ.

ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯ ತಾಯಿ: ಸಂವಿಧಾನದ ಬಗ್ಗೆ ಯುವಕರಿಗೆ ಜಾಗೃತಿ ಬೇಕು- ಪ್ರಧಾನಿ ಮೋದಿ.

ನವದೆಹಲಿ,ನವೆಂಬರ್,26,2022(www.justkannada.in): ವಿಶ್ವಕ್ಕೆ ಭಾರತವೇ ಪ್ರಜಾಪ್ರಭುತ್ವವನ್ನು ನೀಡಿದೆ. ಭಾರತಕ್ಕೆ ಪ್ರಜಾಪ್ರಭುತ್ವವೇ ಶಕ್ತಿಯಾಗಿದೆ’ ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯ ತಾಯಿ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಸಂವಿಧಾನ ದಿನಾಚಾರಣೆ ಅಂಗವಾಗಿ ಮಾತನಾಡಿದ ಪ್ರಧಾನಿ ಮೋದಿ, ‘ದೇಶದಲ್ಲಿ ಮುಂದಿನ ದಿನಗಳಲ್ಲೂ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ’. ಸಂವಿಧಾನದ ಬಗ್ಗೆ ಯುವಕರನ್ನ ಜಾಗೃತಿ ಮೂಡಿಸಬೇಕಿದೆ.   ಸಂವಿಧಾನದ ಪ್ರಸ್ತಾವನೆ ಒಂದು ಭಾವನೆ, ಒಂದು ಪ್ರತಿಜ್ಞೆ.  ಇಂದು ಕಾನೂನುಗಳನ್ನ ಅತಿ ಸರಳವಾಗಿ ರೂಪಿಸಲಾಗಿದೆ ಎಂದರು.

ಇಂದು ವಿಶ್ವದ ಎಲ್ಲ ರಾಷ್ಟ್ರಗಳು ಭಾರತದತ್ತ ತಿರಗಿ ನೋಡುತ್ತಿವೆ. ಭಾರತನ್ನ ಬಹಳ ವಿಶ್ವಾಸದಿಂದ ನೋಡುತ್ತಿವೆ. ನಾವು ವೇಗವಾಗಿ ಏಳಿಗೆ ಹೊಂದುತ್ತಿರುವ ಆರ್ಥಿಕತೆಯನ್ನು ಹೊಂದಿದ್ದೇವೆ. ಇದೆಲ್ಲ ಬಲಿಷ್ಠ ಪ್ರಜಾಪ್ರಭುತ್ವದಿಂದಲೇ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲೂ ಇದೇ ವೇಗ ಕಾಪಾಡಿಕೊಳ್ಳೋಣ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: India – mother -democratic -system – PM –Narendra Modi.